HomeIndiaBIG NEWS: ಆಳಂದ ಬಿಜೆಪಿ ಕಾರ್ಯಕರ್ತನ ಹತ್ಯೆ ಕೇಸ್; ಮೂವರು ಆರೋಪಿಗಳು ಅರೆಸ್ಟ್

BIG NEWS: ಆಳಂದ ಬಿಜೆಪಿ ಕಾರ್ಯಕರ್ತನ ಹತ್ಯೆ ಕೇಸ್; ಮೂವರು ಆರೋಪಿಗಳು ಅರೆಸ್ಟ್

ಕಲಬುರ್ಗಿ: ಆಳಂದ ಬಿಜೆಪಿ ಕರ್ಯಕರ್ತ ಮಹಾಂತಪ್ಪ ಆಲೂರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಮಾದನಹಿಪ್ಪರಗಾ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಜಿತ್ ಕುಮಾರ್ ಕ್ಷೇತ್ರಿ (29), ಆಕಾಶ್ ಕಾಮಠಿ (29), ಮಯೂರ್ ಕ್ಷೇತ್ರಿ (25) ಬಂಧಿತ ಆರೋಪಿಗಳು. ಫೆ.29ರಂದು ಆಳಂದ ತಾಲೂಕಿನ ಸರಸಂಬಾ ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತ ಮಹಾಂತಪ್ಪ ಆಲೂರೆಯನ್ನು ಹತ್ಯೆ ಮಾಡಲಾಗಿತ್ತು.

ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಸರಸಂಬಾ ಗ್ರಾಮದ ಅಜಿತ್ ಪುಣೆಯಿಂದ ಸ್ನೇಹಿತರನ್ನು ಕರೆಸಿ ಕಾರು ಡಿಕ್ಕಿ ಹೊಡೆಸಿ ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿಸಿದ್ದ. ಇದೀಗ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular