HomeLatest NewsBIG NEWS: ಮೋದಿ ಬಿಟ್ಟರೆ ಬಿಜೆಪಿಗೆ ಬೇರೆ ದಾರಿಯೇ ಇಲ್ಲ, 150 ಸೀಟೂ ಬರಲ್ಲ: ದೇಹ...

BIG NEWS: ಮೋದಿ ಬಿಟ್ಟರೆ ಬಿಜೆಪಿಗೆ ಬೇರೆ ದಾರಿಯೇ ಇಲ್ಲ, 150 ಸೀಟೂ ಬರಲ್ಲ: ದೇಹ ಸ್ಪಂದಿಸುವವರೆಗೂ ಅವರೇ ಪ್ರಧಾನಿ: ಬಿರುಗಾಳಿ ಎಬ್ಬಿಸಿದ ಸಂಸದ ನಿಶಿಕಾಂತ್ ದುಬೆ ಹೇಳಿಕೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಅಗತ್ಯವಿಲ್ಲ. ಆದರೆ, ಬಿಜೆಪಿಗೆ ಮೋದಿ ಅಗತ್ಯವಾಗಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿಕೆ ನೀಡಿದ್ದು, ಬಿರುಗಾಳಿ ಎಬ್ಬಿಸಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಮೋದಿಯವರಿಗೆ ಅವರ ದೇಹ ಸ್ಪಂದಿಸುವವರೆಗೂ ಅವರೇ ಪ್ರಧಾನಿಯಾಗಿರುತ್ತಾರೆ, ಮುರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದರಲ್ಲ ಹಾಗೆ. ಮೋದಿ ಇಲ್ಲದೆ ಚುನಾವಣೆ ಎದುರಿಸಿದರೆ ಬಿಜೆಪಿ 150 ಸ್ಥಾನಕ್ಕೆ ಕುಸಿತವಾಗಲಿದೆ. 2029ರ ಎಂಪಿ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಕ್ಕೆ ಕುಸಿಯಲಿದೆ. ಮೋದಿಯಿಂದಾಗಿ ಬಡವರು ಬಿಜೆಪಿಯೊಂದಿಗೆ ಸೇರಿದ್ದಾರೆ. ನರೇಂದ್ರ ಮೋದಿ ಬಿಟ್ಟರೆ ಪಕ್ಷಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಿದ್ದಾರೆ.

ಮುಂದಿನ 15 -20 ವರ್ಷ ಮೋದಿಯೇ ಪಕ್ಷವನ್ನು ಮುನ್ನಡೆಸುತ್ತಾರೆ. ಬಿಜೆಪಿಗೆ ಮೋದಿಯೇ ಹೊರತು ಇನ್ನೊಂದು ದಾರಿ ಇಲ್ಲ. ಮೋದಿ ಇರುವವರೆಗೆ ಯೋಗಿಗೆ ದೆಹಲಿಯಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

75 ವರ್ಷದ ಬಳಿಕ ನಿವೃತ್ತಿ ಆಗಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದರು. ಮೋಹನ್ ಭಾಗವತ್ ಹೇಳಿಕೆಗೆ ನಿಶಿಕಾಂತ್ ದುಬೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular