HomeIndiaBREAKING : ತ್ರಿಪುರದ ಎರಡೂ ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸಿದ ಬಿಜೆಪಿ |Bypoll Results 2023

BREAKING : ತ್ರಿಪುರದ ಎರಡೂ ಕ್ಷೇತ್ರಗಳಲ್ಲೂ ಜಯಭೇರಿ ಭಾರಿಸಿದ ಬಿಜೆಪಿ |Bypoll Results 2023

ಆರು ರಾಜ್ಯಗಳ ಏಳು ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.

ಇದೀಗ ಬಂದ ಮಾಹಿತಿಯ ಪ್ರಕಾರ ತ್ರಿಪುರಾದ ಧನಪುರ್ ಮತ್ತು ಬೊಕ್ಸಾನಗರದ ಎರಡು ಉಪಚುನಾವಣೆ ಸ್ಥಾನಗಳಲ್ಲಿ ಬಿಜೆಪಿ ಶುಕ್ರವಾರ ಜಯಗಳಿಸಿದೆ.

ಬಿಜೆಪಿ ಅಭ್ಯರ್ಥಿ ತಫಜ್ಜಲ್ ಹೊಸೈನ್ ಬೊಕ್ಸಾನಗರ ಕ್ಷೇತ್ರದಲ್ಲಿ 30,237 ಮತ ಪಡೆದಿದ್ದರೆ, ಹೊಸೈನ್ ಅವರ ಪ್ರತಿಸ್ಪರ್ಧಿ ಕಮ್ಯುನಿಸ್ಟ್ ಪಕ್ಷದ ಮಿಜಾನ್ ಹೊಸೈನ್ 3909 ಮತಗಳನ್ನು ಪಡೆದರು. ಈ ಮೂಲಕ ಎರಡು ಉಪಚುನಾವಣೆ ಸ್ಥಾನಗಳಲ್ಲಿ ಬಿಜೆಪಿ ಶುಕ್ರವಾರ ಜಯಗಳಿಸಿದೆ.  ಶೇ.66ರಷ್ಟು ಅಲ್ಪಸಂಖ್ಯಾತ ಮತದಾರರನ್ನು ಹೊಂದಿರುವ ಬಾಕ್ಸಾನಗರ ಕ್ಷೇತ್ರದಲ್ಲಿ ಬಿಜೆಪಿಯ ತಫಜ್ಜಲ್ ಹುಸೇನ್ 30,237 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತರಾಖಂಡದ ಬಾಗೇಶ್ವರ್, ಉತ್ತರ ಪ್ರದೇಶದ ಘೋಸಿ, ಕೇರಳದ ಪುತ್ತುಪಲ್ಲಿ, ಪಶ್ಚಿಮ ಬಂಗಾಳದ ಧುಪ್ಗುರಿ, ಜಾರ್ಖಂಡ್ನ ದುಮ್ರಿ ಮತ್ತು ತ್ರಿಪುರದ ಬಾಕ್ಸಾನಗರ್ ಮತ್ತು ಧನಪುರ ಕ್ಷೇತ್ರಗಳಿಗೆ ಸೆಪ್ಟೆಂಬರ್ 5 ರಂದು ಮತದಾನ ನಡೆಯಿತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular