HomeKarnatakaಅನುಚಿತ ವರ್ತನೆ ಮೂಲಕ ಸಭಾಧ್ಯಕ್ಷರ ಪೀಠ, ಸದನಕ್ಕೆ ವಿಪಕ್ಷದವರಿಂದ ಅಗೌರವ: ಪ್ರಿಯಾಂಕ್ ಖರ್ಗೆ

ಅನುಚಿತ ವರ್ತನೆ ಮೂಲಕ ಸಭಾಧ್ಯಕ್ಷರ ಪೀಠ, ಸದನಕ್ಕೆ ವಿಪಕ್ಷದವರಿಂದ ಅಗೌರವ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ವಿರೋಧಪಕ್ಷದವರು ನಿಜಕ್ಕೂ ಪ್ರತಿಭಟನೆ ನಡೆಸುತ್ತಿದ್ದರೆ, ನಿಯಮಾವಳಿ ಅನುಸಾರ ಸದನದ ಬಾವಿಗೆ ಇಳಿಯಬೇಕು. ಕಳೆದ ಮೂರು ದಿನಗಳಿಂದ ಕಲಾಪ ಆರಂಭವಾದ ಬಳಿಕ ತಮ್ಮ ಆಸನದಲ್ಲಿಯೇ ಕಿರುಚಾಡುತ್ತಾ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಅವರಿಗೆ ರಾಜ್ಯ ಎದುರಿಸುತ್ತಿರುವ ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸಲು ನಿಜಕ್ಕೂ ಆಸಕ್ತಿ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಅವರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಆದರೆ ಅವರು ಪ್ರಶ್ನೆ ಕೇಳಲೇ ಸಿದ್ಧರಿಲ್ಲ. ತಮ್ಮ ಅನುಚಿತ ವರ್ತನೆ ಮೂಲಕ ಸಭಾಧ್ಯಕ್ಷರ ಪೀಠ ಹಾಗೂ ಸದನವನ್ನು ಅಗೌರವಿಸುತ್ತಿದ್ದಾರೆ ಎಂದು ದೂರಿದ್ದಾರೆ.

ವಾಲ್ಮೀಕಿ ನಿಗಮದ ಹಣವು ಕಾಂಗ್ರೆಸ್ ನಾಯಕರ ಮನೆಗೆ ಹೋಗಿದೆ ಎಂದು ಆರೋಪಿಸುವ ಬಿಜೆಪಿಗರು, ಪಿಎಂ ಕೇರ್ಸ್ ಫಂಡ್ ಹೆಸರಲ್ಲಿ ಸಂಗ್ರಹಿಸಿದ ದೇಣಿಗೆ ಎಲ್ಲಿ ಹೋಯ್ತು ಎಂದು ತಿಳಿಸುತ್ತಾರಾ? ರಾಮಮಂದಿರ ನಿರ್ಮಾಣಕ್ಕಾಗಿ ಇಡೀ ದೇಶಾದ್ಯಂತ ದೇಣಿಗೆ ಸಂಗ್ರಹಿಸಿದ್ದರಲ್ಲ, ಅದರ ಹುಂಡಿ ಹಣ ಈಗ ಯಾರ ಮನೆಗೆ ಹೋಗಿದೆ? ಕೆಪಿಎಸ್‌ಸಿ ಹಗರಣದಲ್ಲಿ ಲೂಟಿ ಹೊಡೆದ ಹಣವನ್ನು ಯಾರಿಗೆ ಕಳುಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ಜನತೆ ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಯನ್ನು ನಿರೀಕ್ಷಿಸುತ್ತಾರೆ. ಸದನವು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತದೆ ಎನ್ನುವುದು ಅವರ ಆಶಯ. ಆದರೆ ಬಿಜೆಪಿಗರಿಗೆ ಜನರ ಕುರಿತು ಕಿಂಚಿತ್ ಕಾಳಜಿ ಇಲ್ಲ. ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸಿ, ಗದ್ದಲ ಎಬ್ಬಿಸುವ ಮೂಲಕ ಸದನದ ಕಲಾಪಗಳನ್ನು ಹಾಳುಗೆಡುವುತ್ತಿದ್ದಾರೆ. ರಾಮಮಂದಿರ ಹುಂಡಿ ಕಳವು, ಪಿಎಂ ಕೇರ್ಸ್ ದೇಣಿಗೆ ಅಕ್ರಮದಂತಹ ವಿಚಾರಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಷ್ಟೇ ಇವರ ಉದ್ದೇಶ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular