HomeKarnatakaರಾಮಕೃಷ್ಣ ಹೆಗಡೆಯವರಿಗೆ ಮುಂದೇನಾಗುತ್ತೆ ಎಂದು ಗೊತ್ತಾಗುತ್ತಿತ್ತು; ಅದೇ ರೀತಿ ನನಗೂ ಗೊತ್ತಾಗುತ್ತೆ; ಸರ್ಕಾರ ಹೆಚ್ಚು ದಿನ...

ರಾಮಕೃಷ್ಣ ಹೆಗಡೆಯವರಿಗೆ ಮುಂದೇನಾಗುತ್ತೆ ಎಂದು ಗೊತ್ತಾಗುತ್ತಿತ್ತು; ಅದೇ ರೀತಿ ನನಗೂ ಗೊತ್ತಾಗುತ್ತೆ; ಸರ್ಕಾರ ಹೆಚ್ಚು ದಿನ ನಡೆಯಲ್ಲ ಎಂದ ಸಂಸದ

ವಿಜಯಪುರ: ಕಾಂಗ್ರೆಸ್ ಸರ್ಕಾರ ಕುಂಟುತ್ತಿದೆ, ಹೆಚ್ಚು ದಿನ ನಡೆಯಲ್ಲ ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಭವಿಷ್ಯ ನುಡಿದಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಯಾಗ ಬೀಳುತ್ತದೆ ಗೊತ್ತಿಲ್ಲ. ಆದರೆ ಈ ಸರ್ಕಾರ ಬೀಳೋದು ಗ್ಯಾರಂಟಿ. ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ. ನೀವು ನೋಡ್ತಾ ಇರಿ ಎಂದಿದ್ದಾರೆ.

ಗ್ಯಾರಂಟಿ ನಿಲ್ಲಿಸಲಿ ಬಿಡಲಿ, ಅದು ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಆದರೆ ಮುಂದೆ ಕಾಂಗ್ರೆಸ್ ಸರ್ಕಾರ ಏನಾಗುತ್ತದೆ ಎಂಬುದು ನಮಗೆ ಗೊತ್ತಿದೆ. ರಾಮಕೃಷ್ಣ ಹೆಗಡೆ ಅವರಿಗೆ ಮುಂದೆ ಏನಾಗುತ್ತದೆ ಎಂಬುದು ಗೊತ್ತಾಗುತ್ತಿತ್ತು. ಅವರಿಗೆ ಹೇಗೆ ಗೊತ್ತಾಗುತ್ತಿತ್ತೋ ಹಾಗೇ ನನಗೂ ಗೊತ್ತಾಗುತ್ತದೆ. ಮುಂದೆ ಏನಾಗುತ್ತೆ ಎಂಬ ಚಿತ್ರಣ ನಮ್ಮ ಮುಂದಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular