HomeKarnatakaಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು: ಭ್ರಷ್ಟ ಸಚಿವನನ್ನು ಸದನದಲ್ಲಿ ಕೂರಿಸಿ ಕಲಾಪ ನಡೆಸಲು ಬಿಡಲ್ಲ...

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು: ಭ್ರಷ್ಟ ಸಚಿವನನ್ನು ಸದನದಲ್ಲಿ ಕೂರಿಸಿ ಕಲಾಪ ನಡೆಸಲು ಬಿಡಲ್ಲ ಎಂದ ವಿಪಕ್ಷ ನಾಯಕರು

ಬೆಂಗಳೂರು: ವಿಧಾನಸಭೆಯಲ್ಲಿ ಒಂದೆಡೆ ಅರಣ್ಯ ಅಧಿಕಾರಿಗಳ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣದ ಗದ್ದಲ ನಡೆದಿದರೆ, ಮತ್ತೊಂದೆಡೆ ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಕಲಾಪಕ್ಕೆ ಅವಕಾಶವಿಲ್ಲ ಎಂದು ವಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಘಟನೆ ನಡೆಯಿತು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಹನೂರು ಎನ್ ಕೌಂಟರ್ ನಲ್ಲಿ ಮೂವರು ಬಲಿ ಪ್ರಕರಣ ವಿಚಾರ ಗದ್ದಲ-ಕೋಲಾಹಲಕ್ಕೆ ಕಾರಣವಯಿತು. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದರು. ಪ್ರಕರಣದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಸುದೀರ್ಘವಾಗಿ ಉತ್ತರಿಸಿದರು.

ಇದಾದ ಬಳಿಕ ಸ್ಪೀಕರ್ ಜಿ.ಎಸ್.ಪಾಟೀಲ್ ಪ್ರಶ್ನೋನ್ನತರ ಕಲಾಪಕ್ಕೆ ಸೂಚಿಸಿದರು. ಈ ವೇಳೆ ಎದ್ದುನಿಂತ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ವಾಅಲ್ಮೀಕಿ ನಿಗಮದ ಹಗರಣದ ಆರೋಪ ಹೊತ್ತಿರುವ ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಪ್ರಶ್ಮೋತ್ತರ ಚರ್ಚೆಗೆ ಬಿಡಲ್ಲ ಎಂದರು. ಸುನೀಲ್ ಕುಮಾರ್ ಮಾತಿಗೆ ಇತರ ಬಿಜೆಪಿ ಸದಸ್ಯರು ಧ್ವನಿಗೂಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ನಾಗೇಂದ್ರ ಅವರನ್ನು ಸದನದಲ್ಲಿ ಕೂರಿಸಿಕೊಂಡು ಅವರಿಂದ ನಾವು ಉತ್ತರ ಪಡೆಯಬೇಕೆ? ಒಬ್ಬ ಭ್ರಷ್ಟ ಸಚಿವನಿಂದ ಉತ್ತರ ಪಡೆಯುವ ಸ್ಥಿತಿ ನಮಗಿಲ್ಲ ಎಂದು ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಈಕೂಡಲೇ ನಾಗೇಂದ್ರ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಜೆಡಿಎಸ್ ಸದಸ್ಯರು ಕುದ ಬೆಂಬಲ ನೀಡಿದರು.

ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿದ್ದು ಸರಿಯಲ್ಲ. ನಾಗೇಂದ್ರ ಅವರನ್ನು ವಜಾಗೊಳಿಸುವವರೆಗೆ ಕಲಾಪ ನಡೆಯಲು ಬಿಡುವುದಿಲ್ಲವೆಂದು ಬಿಜೆಪಿ-ಜೆಡಿಎಸ್ ಸದಸ್ಯರು ಸದನದ ಭಾವಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಸದನ ಕಾಪಾಡುವಂತೆ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ-ಕೋಲಾಹಲ ಹೆಚ್ಚುತ್ತಿಂದಂತೆ ಸ್ಪೀಕರ್ ಕಲಾಪವನ್ನು ಕೆಲ ಕಾಲ ಮುಂದೂಡಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular