HomeLatest Newsಕೋಗಿಲು ನಿವಾಸಿಗಳ ಪೌರತ್ವದ ಬಗ್ಗೆ NIA ತನಿಖೆ

ಕೋಗಿಲು ನಿವಾಸಿಗಳ ಪೌರತ್ವದ ಬಗ್ಗೆ NIA ತನಿಖೆ

ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಸುಮಾರು 167 ಶೆಡ್‌ಗಳನ್ನು ಡಿಸೆಂಬರ್ 20ರಂದು ತೆರವುಗೊಳಿಸಲಾಗಿತ್ತು. ಈ ವಿಚಾರ ಈಗ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ. ಎನ್.‌ ಅಶ್ವತ್ಥ್‌ ನಾರಾಯಣ್, ರಾಜ್ಯ ಕಾರ್ಯದರ್ಶಿ ತಮ್ಮೇಶ್‌ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಮುಂತಾದವರು ಇಂದು ಕೋಗಿಲು ಪ್ರದೇಶಕ್ಕೆ ಭೇಟಿ ನೀಡಿದರು.

ಆರ್.‌ ಅಶೋಕ್‌ ಮತ್ತು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಸ್ಥಳದಲ್ಲಿ ಜನರನ್ನು ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ಈಗಾಗಲೇ ಸರ್ಕಾರ ಅಲ್ಲಿನ  ಜನರಿಗೆ ಬೇರೆ ಕಡೆ ಮನೆಯನ್ನು ಒದಗಿಸುವ ಭರವಸೆ ಕೊಟ್ಟಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎನ್‌ಐಎ ತನಿಖೆಗೆ ಆಗ್ರಹ: ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ, “ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್‌, ಮನೆ ತೆರವು ಪ್ರಕರಣದಲ್ಲಿ ಅಲ್ಲಿನ ನಿವಾಸಿಗಳ ಪೌರತ್ವದ ಬಗ್ಗೆ ಎನ್‌ಐಎ ತನಿಖೆ ಆಗಬೇಕು” ಎಂದು ಒತ್ತಾಯಿಸಿದರು.

“ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ಟೋಪಿ ಸರ್ಕಾರವಾಗಿದೆ. ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶ ಮಾಡಿದೆ. ಕರ್ನಾಟಕ ಮಿನಿ ಬಾಂಗ್ಲಾದೇಶ ಹಬ್ ಆಗಿದೆ. ಬೇರೆ ಬೇರೆ ರಾಜ್ಯದಿಂದ ಜನರು ಇಲ್ಲಿಗೆ ಬಂದಿದ್ದಾರೆ” ಎಂದು ಆರೋಪಿಸಿದರು.

“25 ವರ್ಷಗಳಿಂದ ನಾವು ಇಲ್ಲಿ ಇದ್ದೇವೆ ಎಂದು ಜನರು ಹೇಳುತ್ತಿದ್ದಾರೆ. ಇದು ಸಾಧ್ಯವೇ?, ನಾವು ಇವತ್ತು ಬರುತ್ತೇವೆ ಎಂದು ಇಲ್ಲಿದ್ದವನ್ನು ಹೊರಗೆ ಕಳಿಸಿದ್ದಾರೆ. ಟ್ಯಾನಿರಿ ರೋಡ್ ಕಡೆಯಿಂದ ಜನರನ್ನು ಕರೆದುಕೊಂಡು ಬಂದು ಇಲ್ಲಿ ನಿಲ್ಲಿಸಿದ್ದಾರೆ” ಎಂದು ದೂರಿದರು.

“ಇವರೆಲ್ಲರೂ ಏನು ಸಿದ್ದರಾಮಯ್ಯ ಅವರ ಕುಟುಂಬದವರಾ?. ಇದನ್ನು ಮಿನಿ ಬಾಂಗ್ಲಾದೇಶ ಮಾಡಿದ್ದಾರೆ. ಡ್ರಗ್ಸ್ ರಾಜ್ಯ ಆಗುತ್ತಿದೆ ಕರ್ನಾಟಕ. ಪೊಲೀಸರು ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿ ‌ಹಾಕಿಕೊಂಡಿದ್ದಾರೆ. ದಿನಾ ಒದೊಂದು ಕಾಲೋನಿಯಲ್ಲಿ ಮಿನಿ ಬಾಂಗ್ಲಾದೇಶ ಹುಟ್ಟುತ್ತಿದೆ” ಎಂದರು.

“ಇವರು ಯಾವಾಗ ಬಂದರು?, ಎಲ್ಲಿಂದ ಬಂದರು? ಅಂತ ಮಾಹಿತಿ ಇದೆ. ಒಂದು ವರ್ಷದ ಹಿಂದೆ ಯಾರು ಇರಲಿಲ್ಲ. ಈಗ ಇಲ್ಲಿ ಮನೆಗಳು ಇವೆ. ಡಿ.ಕೆ.ಶಿವಕುಮಾರ್ ಅವರು ಅಕ್ರಮ ಮನೆ ಒಡೆದು ಹಾಕುತ್ತೇವೆ ಅಂದರು. ಕರ್ನಾಟಕದಲ್ಲಿನ ಕನ್ನಡದ ಜನರಿಗೆ ಇವರು ಕರೆಂಟ್ ಕೊಡೋಕೆ ಆಗಿಲ್ಲ” ಎಂದು ಆರೋಪಿಸಿದರು.

“ಇಲ್ಲಿರುವ ಎಲ್ಲರ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ದಾಖಲಾತಿ ಪರಿಶೀಲನೆ ಎನ್‌ಐಎಗೆ ವಹಿಸಿಬೇಕು. ಕರ್ನಾಟಕದಲ್ಲಿ 38 ಲಕ್ಷ ಜನ ಮನೆಗಾಗಿ ಕಾದು ಕುಳಿತಿದ್ದಾರೆ. ಅವರಿಗೆ ಕೊಡದೇ ಇವರಿಗೆ ಯಾಕೆ ಕೊಡುತ್ತೀರಿ?. ದಾಖಲಾತಿ ‌ಪರಿಶೀಲನೆ ಆಗದೇ ಮನೆ ಕೊಡಬಾರದು. ಒಂದು ವೇಳೆ ಬೇರೆ ಅವರಿಗೆ ಇಟ್ಟಿರುವ ಮನೆ ಇವರಿಗೆ ಕೊಟ್ಟರೆ ಮನೆಗಾಗಿ ಕಾಯುತ್ತಿರುವ ಅವರನ್ನು ನಾವೇ ಈ ಮನೆಗಳಿಗೆ ನುಗ್ಗಿಸುತ್ತೇವೆ” ಎಂದು ಅಶೋಕ ಎಚ್ಚರಿಕೆ ಕೊಟ್ಟರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ, “ಡಿ.ಕೆ.ಶಿವಕುಮಾರ್, ವಸತಿ ಸಚಿವರಾದ ಜಮೀರ್ ಅಹ್ಮದ್, ಸ್ಥಳೀಯ ಶಾಸಕರಾದ ಕೃಷ್ಣ ಬೈರೇಗೌಡ ಅವರ ಜೊತೆ ಮಾತನಾಡಿ, ಪರ್ಯಾಯ ವ್ಯವಸ್ಥೆ ಮಾಡುವ ಸಂಬಂಧ ಚರ್ಚಿಸಿದ್ದೇನೆ. ಅಲ್ಲೇ ಸಮೀಪದ ಬೈಯ್ಯಪ್ಪನಹಳ್ಳಿಯ ಸರ್ವೇ ನಂ‌.23 ರಲ್ಲಿ ಸುಮಾರು 1,087 ಮನೆಗಳಿವೆ, ಅಧಿಕಾರಿಗಳಿಂದ ಅರ್ಹರ ಪಟ್ಟಿ ಬಂದ ನಂತರ ಅವರಿಗೆ ಬೈಯ್ಯಪ್ಪನಹಳ್ಳಿಯ ಬಹುಮಹಡಿ ಕಟ್ಟಡದಲ್ಲಿ ಮನೆಗಳ ಹಂಚಿಕೆ ಮಾಡುತ್ತೇವೆ. ಇದು ಕೋಗಿಲು ಇಂದ ಕೇವಲ 7 ಕಿ.ಮೀ ದೂರದಲ್ಲಿದೆ” ಎಂದು ಹೇಳಿದ್ದಾರೆ.  

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular