HomeKarnatakaಬಿಜೆಪಿ ‘ಬಳ್ಳಾರಿ ಚಲೋ’ 5ನೇ ದಿನದ ಪಾದಯಾತ್ರೆ ಮುಕ್ತಾಯ: ನಾಳೆ ಬಳ್ಳಾರಿ ಜಿಲ್ಲೆಗೆ ಪ್ರವೇಶ

ಬಿಜೆಪಿ ‘ಬಳ್ಳಾರಿ ಚಲೋ’ 5ನೇ ದಿನದ ಪಾದಯಾತ್ರೆ ಮುಕ್ತಾಯ: ನಾಳೆ ಬಳ್ಳಾರಿ ಜಿಲ್ಲೆಗೆ ಪ್ರವೇಶ

ಕೊಪ್ಪಳ: ಬಿಜೆಪಿ ಬಳ್ಳಾರಿ ಚಲೋ ಐದನೇ ದಿನದ ಪಾದಯಾತ್ರೆ ಮುಕ್ತಾಯವಾಗಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿಯಲ್ಲಿ ಪಾದಯಾತ್ರೆ ಅಂತ್ಯವಾಗಿದೆ.

ಇಂದು 22 ಕಿ.ಮೀ. ಕ್ರಮಿಸಿದ ಬಳ್ಳಾರಿ ಚಲೋ ಪಾದಯಾತ್ರೆ ಮುಕ್ತಾಯವಾಗಿದ್ದು, ನಾಳೆ ಜಂಗಮರ ಕಲ್ಗುಡಿಯಿಂದ ಕಂಪ್ಲಿವರೆಗೆ ಮುಂದುವರೆಯಲಿದೆ. ನಾಳೆ ಸಂಜೆ ಬಿಜೆಪಿ ಪಾದಯಾತ್ರೆ ಬಳ್ಳಾರಿ ಜಿಲ್ಲೆ ಪ್ರವೇಶಿಸಲಿರುವ

ಅನ್ನದಾತರೊಂದಿಗೆ ಸಂವಾದ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಬಳ್ಳಾರಿ ಚಲೋ’ ಜನಾಂದೋಲನದ ನಡುವೆ ಇಂದು ಮರಳಿ ಗ್ರಾಮದಲ್ಲಿ ನಮ್ಮ ಅನ್ನದಾತರಾಗಿರುವ ಕೃಷಿಕ ಬಂಧುಗಳೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಂವಾದ ನಡೆಸಿ, ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ನೈಜ ಸಮಸ್ಯೆಗಳನ್ನು ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ.

ನೆಲವನ್ನೇ ನಂಬಿ, ಕಠಿಣ ಶ್ರಮದಿಂದ ನಾಡಿಗೆ ಅನ್ನ ನೀಡುವ ನಮ್ಮ ನೇಗಿಲಯೋಗಿಗಳ ಹಿತರಕ್ಷಣೆ ಆಡಳಿತಾತ್ಮಕ ಕರ್ತವ್ಯ. ಆದರೆ, ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳು, ಸಾಲು ಸಾಲು ಪ್ರಮಾದಗಳಿಂದ ಬೆಳೆ ಪರಿಹಾರ ಸಿಗದೆ, ಬೆಂಬಲ ಬೆಲೆಯೂ ಇಲ್ಲದೆ ನಮ್ಮ ಅನ್ನದಾತರು ತಮ್ಮ ತೀವ್ರ ಸಂಕಷ್ಟದ ಪರಿಸ್ಥಿತಿಗಳ ಬಗ್ಗೆ ವಿವರಿಸಿದ್ದಾರೆ.

ಗ್ಯಾರಂಟಿಗಳ ನೆಪ ಹೇಳುತ್ತಾ ನೀರಾವರಿ ಯೋಜನೆಗಳು ಹಾಗೂ ಕೃಷಿ ಕ್ಷೇತ್ರಕ್ಕೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಈ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತದ ವಿರುದ್ಧ ರೈತರಲ್ಲಿ ಭಾರಿ ಆಕ್ರೋಶವಿದೆ. ಅನ್ನದಾತರ ಕಣ್ಣೀರ ಕಡೆಗೆ ತಿರುಗಿಯೂ ನೋಡದ ಈ ಲೂಟಿಕೋರ ಸರ್ಕಾರದ ವಿರುದ್ಧ ರೈತರ ಆಕ್ರೋಶಕ್ಕೆ ನಮ್ಮ ಪಾದಯಾತ್ರೆ ಧ್ವನಿ ನೀಡಿದೆ. ರಾಜ್ಯ ಸರ್ಕಾರ ಕೂಡಲೇ ಪ್ರತಿಯೊಬ್ಬ ರೈತನ 5 ಲಕ್ಷ ರೂ.ವರೆಗಿನ ಕೃಷಿ ಸಾಲ ಮನ್ನಾ, ಸೂಕ್ತ ಬೆಳೆ ನಷ್ಟ ಪರಿಹಾರ ಬಿಡುಗಡೆ ಹಾಗೂ ಸಂಕಷ್ಟದಲ್ಲಿರುವ ಎಲ್ಲಾ ತಾಲ್ಲೂಕುಗಳನ್ನು ತಕ್ಷಣವೇ ‘ಬರಪೀಡಿತ’ ಎಂದು ಘೋಷಿಸಬೇಕು. ನಮ್ಮ ರೈತರಿಗೆ ನ್ಯಾಯ ಸಿಗುವ ವರೆಗೂ ನಮ್ಮ ಹೋರಾಟ ನಿಲ್ಲದು ಎಂದು ವಿಜಯೇಂದ್ರ ಹೇಳಿದ್ದಾರೆ.

5ನೇ ದಿನದ ಪಾದಯಾತ್ರೆ

ಭ್ರಷ್ಟ, ಲೂಟಿಕೋರ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಜನಾಕ್ರೋಶ, ಜನಾಂದೋಲನಕ್ಕೆ ಹರಿದುಬರುತ್ತಿರುವ ಜನಸಾಗರವೇ ಈ ಕಾಂಗ್ರೆಸ್ ಸರ್ಕಾರದ ನಿದ್ದೆಗೆಡಿಸಿದೆ. ‘ಬಳ್ಳಾರಿ ಚಲೋ’ ಜನಾಂದೋಲನದ 5ನೇ ದಿನದ ಜನ ನಡಿಗೆ, ಕಾರಟಗಿಯಲ್ಲಿ ಗೋಪೂಜೆ, ಹಿರಿಯರ ಆಶೀರ್ವಾದದೊಂದಿಗೆ ಪ್ರಾರಂಭಗೊಂಡಿತು. ಇಲ್ಲಿನ ಪವಿತ್ರ ಶ್ರೀ ಚನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ನಾಡಿನ ಒಳಿತಿಗಾಗಿ ಹಾಗೂ ಈ ಜನಾಂದೋಲನದ ಯಶಸ್ಸಿಗಾಗಿ ಪ್ರಾರ್ಥಿಸಿ, ವಿಶೇಷ ಪೂಜೆ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಹೆಜ್ಜೆ ಹೆಜ್ಜೆಗೂ ಹರಿದುಬರುತ್ತಿರುವ ಅಪಾರ ಜನಸ್ತೋಮ, ತಾಯಂದಿರ ಹಾರೈಕೆ ಹಾಗೂ ಕಾರ್ಯಕರ್ತರ ಮೇರೆಮೀರಿದ ಉತ್ಸಾಹ ನಮ್ಮ ಹೋರಾಟಕ್ಕೆ ಆನೆಬಲ ತುಂಬುತ್ತಿದೆ. ಕಾಂಗ್ರೆಸ್‌ನ ಭ್ರಷ್ಟ,  ದುರಾಡಳಿತದಿಂದ ಬೇಸತ್ತಿರುವ ಜನರು, ಎಲ್ಲ ಕಡೆ ಸ್ವಯಂಪ್ರೇರಿತರಾಗಿ ತೋರುತ್ತಿರುವ ಬೆಂಬಲವೇ ಈ ಅಧರ್ಮದ ಸರ್ಕಾರದ ಪತನಕ್ಕೆ ಸ್ಪಷ್ಟ ದಿಕ್ಸೂಚಿ.

ಜನಸಾಮಾನ್ಯರ, ರೈತರ ಹಕ್ಕುಗಳನ್ನು ಕಸಿದುಕೊಂಡಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವವರೆಗೂ ಜನಾಕ್ರೋಶ ಕಡಿಮೆಯಾಗದು. ಇಂದಿನ ಯಾತ್ರೆಯಲ್ಲಿ ಮಾಜಿ ಸಚಿವ ಮಾಜಿ ಶಾಸಕ ಶ್ರೀ ಬಸವರಾಜ ದಡೆಸುಗೂರು ಸೇರಿದಂತೆ ಹಲವಾರು ನಾಯಕರು, ಪಕ್ಷದ ಪದಾಧಿಕಾರಿಗಳು, ನಮ್ಮ ಸಹಸ್ರ ಸಹಸ್ರ ಕಾರ್ಯಕರ್ತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪಾಲ್ಗೊಂಡಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular