ನವದೆಹಲಿ: ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಬಿಜೆಡಿ ಪಕ್ಷವು ಯೂ-ಟರ್ನ್ ತೆಗೆದುಕೊಂಡಿದೆ. ರಾಜ್ಯಸಭಾ ಸಂಸದರಿಗೆ ಯಾವುದೇ ಪಕ್ಷದ ವಿಪ್ ಜಾರಿ ಮಾಡಿಲ್ಲ ಎಂದು ಹೇಳಿದೆ.
ಬಿಜು ಜನತಾದಳ(ಬಿಜೆಡಿ) ಸಂಸದ ಸಸ್ಮಿತ್ ಪಾತ್ರ, ನಮ್ಮ ಪಕ್ಷವು ಯಾವಾಗಲೂ ಜಾತ್ಯತೀತತೆ ಮತ್ತು ಒಳಗೊಳ್ಳುವಿಕೆಯ ತತ್ವಗಳನ್ನು ಎತ್ತಿಹಿಡಿದಿದೆ. ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅವರು, ವಕ್ಫ್ ಮಸೂದೆಯ ಬಗ್ಗೆ ಅಲ್ಪಸಂಖ್ಯಾತ ಸಮುದಾಯಗಳ ವಿವಿಧ ವರ್ಗಗಳು ವ್ಯಕ್ತಪಡಿಸಿದ ವೈವಿಧ್ಯಮಯ ಭಾವನೆಗಳನ್ನು ನಾವು ಆಳವಾಗಿ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಡಿ ನಂತರ ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಯೂ ಟರ್ನ್ ತೆಗೆದುಕೊಂಡಿದ್ದು, ಇಂದು ರಾಜ್ಯಸಭೆಯಲ್ಲಿ ಪಕ್ಷದ ವಿಪ್ ಯಾವುದೇ ಇಲ್ಲ ಎಂದು ತನ್ನ ಸಂಸದರಿಗೆ ಹೇಳಿದ್ದಾರೆ.
The Biju Janata Dal has always upheld the principles of secularism and inclusivity, ensuring the rights of all communities. We deeply respect the diverse sentiments expressed by different sections of the Minority communities regarding the Waqf (Amendment) Bill, 2024. Our Party,…
— ଡ଼ଃ ସସ୍ମିତ ପାତ୍ର I Dr. Sasmit Patra (@sasmitpatra) April 3, 2025