ಖ್ಯಾತ ಸಂಗೀತಗಾರ ಹ್ಯಾರಿ ಸ್ಟೈಲ್ಸ್ ಸಂಗೀತ ಕಚೇರಿ ನಡೆಯುವಾಗಲೇ ತನ್ನ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಕಾಲಿಗೆ ಹಾಕಿಕೊಂಡಿದ್ದ ಶೂ ಕಳಚಿ ಅದರಲ್ಲಿ ಬಿಯರ್ ತುಂಬಿಕೊಂಡು ಕುಡಿದಿದ್ದು, ಇದನ್ನು ನೋಡಿ ಒಂದು ಕ್ಷಣ ಪ್ರೇಕ್ಷಕರು ದಂಗಾಗಿದ್ದಾರೆ.
ಇಂಥದೊಂದು ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, 29 ವರ್ಷದ ಹ್ಯಾರಿ ಸ್ಟೈಲ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಹಾಡಿನ ಮಧ್ಯೆ ಒಂದು ಬ್ರೇಕ್ ತೆಗೆದುಕೊಂಡ ಅವರು, ಶೂನಲ್ಲಿ ಬಿಯರ್ ಹಾಕಿಕೊಂಡು ಕುಡಿದು ಬಳಿಕ ಮತ್ತೆ ಕಾಲಿಗೆ ಶೂ ಹಾಕಿಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿಯೇ ವೈರಲ್ ಆಗಿದ್ದು, ಕೆಲವರು ಚೀ…..ಚೀ……. ಎಂದಿದ್ದಾರೆ. ಮತ್ತೆ ಕೆಲವರು ಹ್ಯಾರಿ ನಿಮಗೆ ಏನಾಗಿದೆ ಎಂದು ಪ್ರಶ್ನಿಸಿದ್ದು, ಇದು ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ.
https://twitter.com/RicciardoBrazil/status/1627831581229432845?ref_src=twsrc%5Etfw%7Ctwcamp%5Etweetembed%7Ctwterm%5E1627831581229432845%7Ctwgr%5E6c5947cf1ab8b55efcee2adaf2e370378f2877dd%7Ctwcon%5Es1_&ref_url=https%3A%2F%2Fzeenews.india.com%2Fpeople%2Fbizzare-harry-styles-drinks-out-of-shoe-during-australia-concert-watch-2575576.html