HomeKarnatakaBIG NEWS: ಬಿಟ್ ಕಾಯಿನ್ ಹಗರಣ: ಮಧ್ಯಂತರ ವರದಿ ನೀಡಲು SITಗೆ ಸೂಚಿಸಿದ ಗೃಹ ಸಚಿವ...

BIG NEWS: ಬಿಟ್ ಕಾಯಿನ್ ಹಗರಣ: ಮಧ್ಯಂತರ ವರದಿ ನೀಡಲು SITಗೆ ಸೂಚಿಸಿದ ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಬಿಟ್‌ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಮಧ್ಯಂತರ ವರದಿ ನೀಡಲು ಹೇಳಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಬಿಟ್‌ ಕಾಯಿನ್ ಪ್ರಕರಣದಲ್ಲಿ ಎಸ್ ಐಟಿ ತನಿಖೆ ವಿಳಂಬವಾಗಿದೆ. ಬೇಗ ತನಿಖೆ ಮಾಡಿ ಅಂತ ನಾನೂ ಸೂಚಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಸಹ ಸೂಚಿಸಿದ್ದಾರೆ. ಮಧ್ಯಂತರ ವರದಿ ಕೊಡಲು ಹೇಳಿದ್ದೇವೆ ಎಂದರು.

ಎಸ್ ಐಟಿಯಿಂದ ಜಾರಿನಿರ್ದೇಶನಾಲಯ (ಇಡಿ) ಮಾಹಿತಿ ಪಡೆದಿರಬಹುದು. ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಇಡಿ ಹೇಳಬೇಕು. ಶ್ರೀಕಿ ಜೊತೆ ಪ್ರಭಾವಿಗಳ ಮಕ್ಕಳಿದ್ದಾರೆ. ಇದನ್ನು ಇಡಿಯವರೇ ಹೇಳಬೇಕು. ರಾಜಕೀಯವಾಗಿ ನಾವು ಮಾತಾಡಬಹುದು. ಆದರೆ ಸತ್ಯಾಸತ್ಯತೆ ಏನು ಎಂಬುದು ಗೊತಾಗಬೇಕಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಹಮ್ಮದ್ ನಲಪಾಡ್ ಮೇಲೆ ಇಡಿ ದಾಳಿ ವಿಚಾರವಾಗಿ, ಶಾಸಕ ಹ್ಯಾರಿಸ್ ಅವರ ಇಬ್ಬರು ಮಕ್ಕಳ ಮನೆಗಳ ಮೇಲೆ ಇಡಿ ದಾಳಿಯಾಗಿದೆ. ಒಳಗಿನ ವಿಚಾರಗಳು ನಮಗೆ ತಿಳಿದಿಲ್ಲ. ದಾಳಿ ಬಗ್ಗೆ ಇಡಿಯವರೇ ಹೇಳಬೇಕು. ಪ್ರೆಸ್‌ನೋಟ್ ಹೊರಡಿಸಬೇಕು. ಸರ್ಕಾರ ಈ ಹಿಂದೆಯೇ ಎಸ್ಐಟಿ ರಚಿಸಿತ್ತು. ಎಸ್‌ಐಟಿ ಇನ್ನೂ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂದರು.

ಇದೇ ವೇಳೆ ಅಧಿಕಾರಿಗಳಿಗೆ ಕಿರುಕುಳ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಇದರ ಬಗ್ಗೆ ವರದಿ ಕೇಳಿದ್ದೇನೆ. ಡಿಜಿಪಿಗೆ ವರದಿ ಕೊಡಿ ಅಂತ ಹೇಳಿದ್ದೇನೆ. ಅವರು ವರದಿ ಕೊಡಬೇಕು. ಸತ್ಯಾಸತ್ಯತೆ ನೋಡಿಕೊಂಡು ಕ್ರಮ ಕೈಗೊಳ್ತೇವೆ. ಇನ್ಸ್‌ಪೆಕ್ಟರ್ ಶ್ರೀನಿವಾಸ್ ಪತ್ರ ಬರೆದಿದ್ದಾರೆ. ಎಸ್‌ಪಿ ಕಾಶೀನಾಥ್ ಅವರಿಗೆ ಪ್ರಕರಣದ ವರದಿ ಕೇಳಿದ್ದೇನೆ. 2 ಪ್ರಕರಣದ ವರದಿ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular