HomeLatest NewsBIG NEWS: ಬಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ: ನರ್ಸ್ ವೇಷದಲ್ಲಿ ಯುವತಿಯಿಂದ ರೋಗಿಗಳಿಗೆ ಚಿಕಿತ್ಸೆ ಆರೋಪ

BIG NEWS: ಬಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಾಂಡ: ನರ್ಸ್ ವೇಷದಲ್ಲಿ ಯುವತಿಯಿಂದ ರೋಗಿಗಳಿಗೆ ಚಿಕಿತ್ಸೆ ಆರೋಪ

ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮತ್ತೊಂದು ಕರ್ಮಕಂಡ ಬೆಳಕಿಗೆ ಬಂದಿದೆ. ನರ್ಸ್ ವೇಷಧರಿಸಿ ಯುವತಿಯೊಬ್ಬಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹಲವು ದಿನಗಳಿಂದ ಯುವತಿಯೊಬ್ಬಳು ನರ್ಸ್ ಗಳಂತೆ ವೇಷತೊಟ್ಟು ಬಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಳೆ. ಕಳೆದ ಮೂರು ತಿಂಗಳಿಂದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೂಲದ ಸನಾ ಶೇಖ್ ಎಂಬ ಯುವತಿ ಬಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ರಂತೆ ಚಿಕಿತ್ಸೆ ನೀಡುತ್ತಿದ್ದು, ಆಸ್ಪತ್ರೆ ವಿಭಾಗವೊಂದರ ಮುಖ್ಯಸ್ಥರ ಕುಮ್ಮಕ್ಕಿನಿಂದ ಯುವತಿ ಈ ರೀತಿ ಮಾಡುತ್ತಿದ್ದಾಳೆ ಎಂದು ಹೇಳಲಾಗುತ್ತಿದೆ.

ಪ್ರಶ್ನಿಸಿದಾಗ ತಾನು ತರಬೇತಿಗೆ ಬದಿದ್ದಾಗಿ ಹೇಳಿಕೊಳ್ಳುತ್ತಿದ್ದು, ಆದರೆ ತರಬೇತಿಗೆಂದು ಆಕೆಯನ್ನು ಬಿಮ್ಸ್ ಆಸ್ಪತ್ರೆಯಲ್ಲಿ ನೇಮಕ ಮಾಡಿಲ್ಲ ಎಂದು ತಿಳಿದುಬಂದಿದೆ. ಆಸ್ಪತ್ರೆ ಮುಖ್ಯಸ್ಥರೊಬ್ಬರು ಯುವತಿಯನ್ನು ಕರೆತಂದಿದ್ದು, ತಮಗೆ ಬೇಕಾದ ರೋಗಿಗಳನ್ನು ಇಲ್ಲಿಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಸರ್ಜಿಕಲ್ ವಾರ್ಡ್, ಒಟಿಯಲ್ಲಿ ಯುವತಿ ಅಕ್ರಮವಾಗಿ ಚಿಕಿತ್ಸೆ ನೀಡುತ್ತಿದ್ದು, ಈ ಬಗ್ಗೆ ಬಿಮ್ಸ್ ನಿರ್ದೇಶಕರು ಹಾಗೂ ಸರ್ಜನ್ ಯುವತಿ ಸನಾಳ ವಿಚಾರಣೆ ನಡೆಸಿದ್ದಾರೆ. ಯುವತಿ ಯಾರು? ನಿಜಕ್ಕೂ ನಕಲಿ ನರ್ಸಾ? ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular