HomeKarnatakaರಾಜ್ಯದಲ್ಲಿ ಸಿಗರೆಟ್ ಸೇವನೆ ವಯೋಮಿತಿ ’21’ಕ್ಕೆ ಹೆಚ್ಚಳ : ವಿಧೇಯಕ ಅಂಗೀಕಾರ

ರಾಜ್ಯದಲ್ಲಿ ಸಿಗರೆಟ್ ಸೇವನೆ ವಯೋಮಿತಿ ’21’ಕ್ಕೆ ಹೆಚ್ಚಳ : ವಿಧೇಯಕ ಅಂಗೀಕಾರ

ಬೆಂಗಳೂರು : ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ ಹಾಗೂ ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ ಮಾಡುವ ಮಹತ್ವದ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ‌ಅಂಗೀಕಾರವಾಗಿದೆ.

ಈ ಕುರಿತು ಸಚಿವ ದಿನೇಶ್‌ ಗುಂಡೂರಾವ್‌ ಮಾಹಿತಿ ನೀಡಿದ್ದು,  2024 ನೇ ಸಾಲಿನ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಕರ್ನಾಟಕ ತಿದ್ದುಪಡಿ ವಿಧೇಯಕ ವಿರೋಧ ಪಕ್ಷಗಳ ಮೆಚ್ಚುಗೆ ಜೊತೆಗೆ ಅಂಗೀಕಾರಗೊಂಡಿದೆ. ಕರ್ನಾಟಕದಲ್ಲಿ ಸಿಗರೇಟು ನಿಷೇಧದ ವಯೋಮಿತಿಯನ್ನು‌ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ.

ಶಾಲಾ ಕಾಲೇಜು ಆವರಣದಲ್ಲಿ‌‌ ತಂಬಾಕು ಮಾರಾಟ ವಿಷೇಧ ಮಿತಿ‌ ನೂರು ಯಾರ್ಡ್ ಇದ್ದಿದ್ದನ್ನು ನೂರು ಮೀಟರ್ ಎಂದು ಬದಲಾವಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular