ಟೇಸ್ಟ್​ ಆಫ್​ ಇಂಡಿಯಾ: ರೋಟಿ ತಯಾರಿಸಿದ ಟೆಕ್​ ದಿಗ್ಗಜ ಬಿಲ್​ ಗೇಟ್ಸ್​

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್‌ ಭಾರತದಲ್ಲಿ ಪ್ರಸಿದ್ಧವಾದ ರೊಟ್ಟಿಯನ್ನು ತಯಾರಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಇವರು ರೊಟ್ಟಿಗಳನ್ನು ತಯಾರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ತಮ್ಮ ಜೊತೆ ಬಿಲ್​ ಗೇಟ್ಸ್​ ರೋಟಿ ತಯಾರಿಸುತ್ತಿರುವ ವಿಡಿಯೋವನ್ನು ಖ್ಯಾತ ಬಾಣಸಿಗ ಈಟಾನ್ ಬರ್ನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ಇತ್ತೀಚೆಗೆ ಭಾರತಕ್ಕೆ ಬಂದಿದ್ದೇನೆ ಮತ್ತು ರೊಟ್ಟಿಗಳನ್ನು ಹೇಗೆ ಮಾಡಬೇಕೆಂದು ಕಲಿತಿದ್ದೇನೆ ಎಂದು ಬರ್ನಾಥ್, ಗೇಟ್ಸ್‌ಗೆ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು.

ವಿಡಿಯೋದ ಆರಂಭದಲ್ಲಿ ಬರ್ನಾಥ್ ಬಟ್ಟಲಿನಲ್ಲಿ ಸ್ವಲ್ಪ ಹಿಟ್ಟನ್ನು ಹಾಕಿದರು. ಅದಕ್ಕೆ ಗೇಟ್ಸ್ ನೀರನ್ನು ಸೇರಿಸಿದ್ದಾರೆ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಲು ಪ್ರಾರಂಭಿಸಿದರು. ಈ ವೇಳೆ ಇಬ್ಬರ ನಡುವೆ ಬಿಹಾರದ ಅಡುಗೆ ಬಗ್ಗೆ ಮಾತು ಕೂಡ ನಡೆಯುವುದನ್ನು ನೋಡಬಹುದು. ಇದು ಟೇಸ್ಟ್​ ಆಫ್​ ಇಂಡಿಯಾ ಎಂದು ಬಿಲ್ ಗೇಟ್ಸ್​ ಹೊಗಳಿದ್ದಾರೆ.

https://twitter.com/EitanBernath/status/1621208736457957376?ref_src=twsrc%5Etfw%7Ctwcamp%5Etweetembed%7Ctwterm%5E1621208736457957376%7Ctwgr%5E45e18cba5be9a9951d9a55aceda6a48ace80e938%7Ctwcon%5Es1_&ref_url=https%3A%2F%2Fzeenews.india.com%2Fcompanies%2Fbill-gates-gets-a-taste-of-india-microsoft-founder-tries-his-hand-at-making-roti-with-american-chef-watch-2569122.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read