HomeLatest Newsಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದ ಪ್ರಕರಣ: ಕೋಮಾಗೆ ಜಾರಿದ ಗಾಯಾಳು ಸ್ಥಿತಿ ಗಂಭೀರ

ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದ ಪ್ರಕರಣ: ಕೋಮಾಗೆ ಜಾರಿದ ಗಾಯಾಳು ಸ್ಥಿತಿ ಗಂಭೀರ

ಬೆಂಗಳೂರು: ಬೆಂಗಳೂರಿನಲ್ಲಿ ಬೈಕ್ ಸವಾರನ ಮೇಲೆ ಮರದ ಕೊಂಬೆ ಬಿದ್ದ ಘಟನೆಗೆ ಸಂಬಂಧಿಸಿದಂತೆ ಗಾಯಾಳು ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.

ಮರದ ಕೊಂಬೆ ಬಿದ್ದು ಗಂಭೀರವಾಗಿದ್ದ ಬೈಕ್ ಸವಾರ ಅಕ್ಷಯ್, ಕೋಮಾಗೆ ಜಾರಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ನ್ಯೂರೋ ಸರ್ಜನ್ ಡಾ.ಶ್ರೀಧರ್ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾನುವಾರ ಮಧ್ಯಾಹ್ನ ಬನಶಂಕರಿಯ ಬ್ರಹ್ಮಚೈತನ್ಯ ಮಂದಿರದ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಅಕ್ಷಯ್ ಮೇಲೆ ಬಿರುಗಾಳಿ ಹೊಡೆತಕ್ಕೆ ಮರದ ಕೊಂಬೆ ಮುರಿದುಬಿದ್ದಿತ್ತು. ಇದರಿಂದಾಗಿ ಅಕ್ಷಯ್ ತಲೆಗೆ ಗಂಭೂರವಾದ ಪೆಟ್ಟುಬಿದ್ದಿತ್ತು. ಅಕ್ಷಯ್ ಅವರನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಕ್ಷಯ್ ಸ್ಥಿತಿ ಬಗ್ಗೆ ವಿವರಿಸಿರುವ ವೈದ್ಯರು ಆತನ ತಲೆಗೆ ಗಂಭೀರವಾದ ಪೇಟ್ಟಾಗಿದೆ. ಸದ್ಯ ಆಪರೇಷನ್ ಮಾಡಲಾಗಿದ್ದು ಕಂಡಿಷನ್ ಕ್ರಿಟಿಕಲ್ ಆಗಿದೆ. ಅಂಗಾಂಗಗಳು ಕೆಲಸ ಮಾಡಲು ಮೆಡಿಸನ್ ನೀಡಲಾಗುತ್ತಿದೆ. ಸದ್ಯ ಅವರು ಕೋಮಾಗೆ ಹೋಗಿದ್ದಾರೆ. ಬ್ಲೀಡಿಂಗ್ ಕಂಟ್ರೋಲ್ ಮಾಡಲು ಆಪರೇಷನ್ ಮಾಡಿದ್ದೇವೆ. ಈಗಲೇ ಏನೂ ಹೇಳಲಾಗದು ಎಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular