ಗದಗ: ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂಬುದು ಗೊತ್ತಿದ್ದರೂ ಮಳೆಯ ನಡುವೆಯೇ ಓವರ್ ಸ್ಪೀಡ್ ಆಗಿ ಬೈಕ್ ಓಡಿಸಿ ದುರಂತಕ್ಕೀಡಾಗಿರುವ ಗಹ್ಟನೆ ಗದಗದಲ್ಲಿ ನಡೆದಿದೆ.
ಓವರ್ ಸ್ಪೀಡ್ ಜೊತೆಗೆ ಒಂದೇ ಬೈಕ್ ನಲ್ಲಿ ನಾಲ್ವರು ತೆರಳುತ್ತಿದ್ದರು. ವೇಗವಾಗಿ ಬಂದ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪರಿಣಾಮ ಬೈಕ್ ನಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗದಗ ಜಿಲ್ಲೆಯ ಮುಂದರಗಿ ತಾಲೂಕಿನ ಹಳ್ಳಿಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಈ ಘಟನೆ ನಡೆದಿದೆ. ಗಣೇಶ್ ಸೋಮಪ್ಪ ನ್ಯಾರಲಗಂಟಿ (36) ಮೃತ ದುರ್ದೈವಿ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ದ್ಯಾಮನಕೊಪ್ಪ ನಿವಾಸಿ.
ಬೈಕ್ ನಲ್ಲಿ ಹಿಂದೆ ಕುಳಿತಿದ್ದ ಓರ್ವ ಮಹಿಳೆ, ಮಗು, ವೃದ್ಧ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.