HomeLatest NewsBIG NEWS: ಬಿಹಾರ ವಿಧಾನಸಭಾ ಚುನಾವಣೆ: 18 ಅಭ್ಯರ್ಥಿಗಳ ಕೊನೇ ಪಟ್ಟಿ ಪ್ರಕಟಿಸಿದ ಬಿಜೆಪಿ

BIG NEWS: ಬಿಹಾರ ವಿಧಾನಸಭಾ ಚುನಾವಣೆ: 18 ಅಭ್ಯರ್ಥಿಗಳ ಕೊನೇ ಪಟ್ಟಿ ಪ್ರಕಟಿಸಿದ ಬಿಜೆಪಿ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ 18 ಅಭ್ಯರ್ಥಿಗಳ ಕೊನೇ ಪಟ್ಟಿ ಬಿಡುಗಡೆ ಮಾಡಿದೆ.

ಈ ಮೂಲಕ ಬಿಜೆಪಿ ಬಿಹಾರ ಚುನಾವಣೆಗೆ ಒಟ್ಟು 101 ಅಭ್ಯರ್ಥಿಗಳ ಪಟ್ಟಿಯನ್ನು ಮೂರು ಹಂತಗಳಲ್ಲಿ ಬಿಡಿಗಡೆ ಮಾಡಿದೆ. ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ 71 ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಎರಡನೇ ಪಟ್ಟಿಯಲ್ಲಿ 12 ಅಭ್ಯರ್ಥಿಗಳ ಹೆಸರು ಘೋಷಿಸಿತ್ತು. ಇದೀಗ ಮೂರನೇ ಹಾಗೂ ಕೊನೇ ಪಟ್ಟಿ ಪ್ರಕಟಿಸಿದ್ದು, 18 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಬಿಜೆಪಿ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಅವುಗಳಲ್ಲಿ 17 ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular