ಬಿಹಾರ ಚುನಾವಣೆಗೆ ಮುನ್ನ 51 ಲಕ್ಷ ಹೆಸರು ಮತದಾರರ ಪಟ್ಟಿಯಿಂದ ಔಟ್: ಚುನಾವಣಾ ಆಯೋಗ ಘೋಷಣೆ

ಪಾಟ್ನಾ: ಬಿಹಾರದಲ್ಲಿ ಸಾವು ಅಥವಾ ವಲಸೆ ಕಾರಣ ನೀಡಿ 51 ಲಕ್ಷ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಚುನಾವಣಾ ಆಯೋಗ ಇಂದು ಘೋಷಿಸಿದೆ.

ಆಗಸ್ಟ್ 1 ರಂದು ಪ್ರಕಟಿಸಲು ನಿರ್ಧರಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಎಲ್ಲಾ ಅರ್ಹ ಮತದಾರರನ್ನು ಸೇರಿಸಲಾಗುವುದು ಎಂದು ಭರವಸೆ ನೀಡಿದೆ.

ಬಿಹಾರ SIR ನಿಂದ ಇಲ್ಲಿಯವರೆಗೆ ಬಹಿರಂಗಗೊಂಡ ಸಂಗತಿಗಳು ಎಂಬ ಶೀರ್ಷಿಕೆಯ ಟಿಪ್ಪಣಿಯಲ್ಲಿ, ಬಿಹಾರ ವಿಶೇಷ ತೀವ್ರ ಪರಿಷ್ಕರಣೆ(SIR) ಇಲ್ಲಿಯವರೆಗೆ 18 ಲಕ್ಷ ಮತದಾರರು ಸಾವನ್ನಪ್ಪಿದ್ದಾರೆ, 26 ಲಕ್ಷ ಜನರು ವಿವಿಧ ಕ್ಷೇತ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ ಮತ್ತು 7 ಲಕ್ಷ ಜನರು ಎರಡು ಸ್ಥಳಗಳಲ್ಲಿ ದಾಖಲಾಗಿದ್ದಾರೆ ಎಂದು ಬಹಿರಂಗಪಡಿಸಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಪರಿಶೀಲನೆಯನ್ನು ನಡೆಸುತ್ತಿರುವ ಆಯೋಗವು, ಬಿಹಾರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ(SIR) ತನ್ನ ಸಾಂವಿಧಾನಿಕ ಜವಾಬ್ದಾರಿಯ ಭಾಗವಾಗಿದೆ ಎಂದು ಹೇಳಿದೆ.

ಜೂನ್ 24, 2025 ರಂದು ಹೊರಡಿಸಲಾದ ವಿಶೇಷ ತೀವ್ರ ಪರಿಷ್ಕರಣೆ(SIR) ಆದೇಶದ ಪ್ರಕಾರ, ಸಾರ್ವಜನಿಕರಿಗೆ ಕರಡು ಮತದಾರರ ಪಟ್ಟಿಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ಬದಲಾವಣೆಗಳನ್ನು ಕೋರಲು ಆಗಸ್ಟ್ 1 ರಿಂದ ಸೆಪ್ಟೆಂಬರ್ 1 ರವರೆಗೆ ಪೂರ್ಣ ತಿಂಗಳು ಇರುತ್ತದೆ ಎಂದು ಆಯೋಗವು ತಿಳಿಸಿದೆ.

ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 30 ರಂದು ಪ್ರಕಟಿಸಲಾಗುವುದು. ಮುಖ್ಯವಾಗಿ, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕದವರೆಗೆ ಹೊಸ ಮತದಾರರನ್ನು ನೋಂದಾಯಿಸಿಕೊಳ್ಳಬಹುದು ಎಂದು ಆಯೋಗ ಸ್ಪಷ್ಟಪಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read