Bihar: ಬುರ್ಖಾಧಾರಿ ಮಹಿಳೆ ಮೇಲೆ ಗುಂಡಿನ ದಾಳಿ; ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

article-image

ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಮಹಿಳೆಯೊಬ್ಬರು ತಮ್ಮ ಮನೆಗೆ ಹಿಂದಿರುಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬಿಹಾರದ ಮುಜಾಫರ್ ಪುರದಲ್ಲಿ ನಡೆದಿದೆ. ಈ ಆಘಾತಕಾರಿ ಘಟನೆಯ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಬೆಚ್ಚಿ ಬೀಳಿಸುವಂತಿದೆ.

ಮಂಗಳವಾರ ಸಂಜೆ ಮುಜಾಫರ್ಪುರದ ಚಂದ್ವಾರ ಆಲಿ ಮಿರ್ಜಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ಸಜಿದಾ ಆಫ್ರಿನ್ ಮೃತಪಟ್ಟವರಾಗಿದ್ದಾರೆ. ಇವರ ಪತಿ ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಜೀದಾ ಫಿಜಿಯೋಥೆರಪಿಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಈ ಗುಂಡಿನ ದಾಳಿ ನಡೆದಿದೆ.

ಸಿಸಿ ಟಿವಿ ದೃಶ್ಯಾವಳಿಯಂತೆ ಸಜಿದಾ ಅವರು ನಡೆದು ಹೋಗುತ್ತಿದ್ದ ವೇಳೆ ಓರ್ವ ಹಿಂಬದಿಯಿಂದ ಬಂದು ಗುಂಡು ಹಾರಿಸಿದ್ದಾನೆ. ಸಜಿದಾ ಕುಸಿದು ಬೀಳುತ್ತಿದ್ದಂತೆ ಮುಂದೆ ಬೈಕಿನಲ್ಲಿ ಕಾದು ನಿಂತಿದ್ದ ತನ್ನ ಸಹಚರದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ.

ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದವರು ಕೂಡಲೇ ಸಜೀದಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲು ಶ್ರೀ ಕೃಷ್ಣ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದು, ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

https://twitter.com/Biharyouth1/status/1709445841784840475?ref_src=twsrc%5Etfw%7Ctwcamp%5Etweetembed%7Ctwterm%5E1709445841784840475%7Ctwgr%5Ef2ed9998ce4c90a3e50d255ebf330a72cad66a36%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbihar-shocker-burqa-clad-woman-shot-dead-by-bike-borne-assailants-in-muzaffarpur-murder-caught-on-cctv

https://twitter.com/iamharunkhan/status/1709269061824131440?ref_src=twsrc%5Etfw%7Ctwcamp%5Etweetembed%7Ctwterm%5E1709269061824131440%7Ctwgr%5Ef2ed9998ce4c90a3e50d255ebf330a72cad66a36%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbihar-shocker-burqa-clad-woman-shot-dead-by-bike-borne-assailants-in-muzaffarpur-murder-caught-on-cctv

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read