ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಮತ್ತೆ ಬರುತ್ತಿದ್ದು, ಸೀಸನ್ 13ರಲ್ಲಿ ಸೆಲೆಬ್ರಿಟಿಗಳ ಜತೆ ಸಾಮಾನ್ಯ ಜನರೂ ಸಹ ಸ್ಪರ್ಧಿಗಳಾಗಬಹುದು ಎಂದು ಕಾರ್ಯಕ್ರಮದ ಆಯೋಜಕರು ಆಡಿಷನ್ ನಡೆಸಿದ್ದಾರೆ.
ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ನಟಿ ಶೃತಿ, ಸಂಗೀತಾ ಶೃಂಗೇರಿ, ಚಂದನ್ ಶೆಟ್ಟಿ ಹಾಗೂ ವಿನಯ್ ಗೌಡ ಈ ಆಡಿಷನ್‌ಗೆ ಜಡ್ಜ್‌ಗಳಾಗಿದ್ದು, 60 ಮಂದಿ ಜನಸಾಮಾನ್ಯರು ಈ ಆಡಿಷನ್‌ನಲ್ಲಿ ಭಾಗವಹಿಸಿದ್ದರು.
ಈ ಆಡಿಷನ್‌ನ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪೈಕಿ ವಿನಯ್ ಗೌಡ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನಿಗೆ ಕೌಂಟರ್ ಕೊಡಲು ಹೋಗಿ ಟ್ರೋಲ್ ಆಗಿರುವ ವಿಡಿಯೊಗಳು ಹೆಚ್ಚಾಗಿ ಸದ್ದು ಮಾಡುತ್ತಿದೆ.
ಈ ಸ್ಪರ್ಧಿಗೆ ಏನು ಓದುತ್ತಿದ್ದೀಯ ಎಂದು ಪ್ರಶ್ನೆ ಕೇಳಿದ ವಿನಯ್ ಆತ ಎಂಜಿನಿಯರಿಂಗ್ ಎಂದು ಉತ್ತರಿಸುತ್ತಿದ್ದಂತೆ ‘ಒಂದು ಸರ್ಕಲ್‌ಗೆ ಎಷ್ಟು ಸೈಡ್ ಇರುತ್ತೆ?’ ಎಂದು ಪ್ರಶ್ನೆ ಹಾಕಿದ್ದಾರೆ. ಈ ಪ್ರಶ್ನೆಗೆ ಆ ಸ್ಪರ್ಧಿ ಸರ್ಕಲ್‌ಗೆ ಸೈಡ್ಸ್ ಇರಲ್ವಲ್ಲ ಸರ್ ಎಂದು ಉತ್ತರಿದ್ದಾನೆ.
ಹೀಗೆ ಉತ್ತರ ಬರುತ್ತಿದ್ದಂತೆ ಎದ್ದು ನಿಂತು ಚಪ್ಪಾಳೆ ಹೊಡೆದ ವಿನಯ್ ಒಂದು ಸರ್ಕಲ್‌ಗೆ ಎರಡು ಸೈಡ್ ಇರುತ್ತೆ, ಒಂದು ಇನ್‌ಸೈಡ್ ಹಾಗೂ ಇನ್ನೊಂದು ಔಟ್‌ಸೈಡ್ ಎಂದಿದ್ದಾರೆ. ಆದರೆ ಅಸಲಿಯತ್ತಿಗೆ ಸರ್ಕಲ್‌ಗೆ ಯಾವುದೇ ಸೈಡ್ ಇರುವುದಿಲ್ಲ ಎಂಬುದೇ ಸರಿಯಾದ ಉತ್ತರವಾಗಿದ್ದು, ಇದೇ ಕಾರಣಕ್ಕೆ ನೆಟ್ಟಿಗರು ವಿನಯ್ ಗೌಡ ಸರ್ಕಲ್‌ನಲ್ಲಿ ಸೈಡ್ ಕಂಡುಹಿಡಿದ ವಿಜ್ಞಾನಿ ಎಂದು ಕಾಲೆಳೆದಿದ್ದಾರೆ.
ಎಐ ಬಳಸಿ ವಿನಯ್ ಗೌಡ ಫೀಲ್ಡ್ ಮೆಡಲ್ಸ್ ಪ್ರಶಸ್ತಿ ಪಡೆಯುತ್ತಿರುವ ಹಾಗೆ ಎಡಿಟ್ ಮಾಡಿ ಟ್ರೋಲ್ ಮಾಡಿದ್ದಾರೆ. ಅಲ್ಲದೇ ಆಟೊ ಚಾಲಕ ಎಲ್ಲಿಗೆ ಹೋಗಬೇಕು ಎಂದಾಗ ಪ್ರಯಾಣಿಕ ನಾಗಸಂದ್ರ ಸರ್ಕಲ್‌ಗೆ ಎಂದು ಉತ್ತರಿಸಿದ್ದು, ಸರ್ಕಲ್‌ನಲ್ಲಿ ಎಲ್ಲಿ ಇನ್‌ಸೈಡ್ ಅಥವಾ ಔಟ್‌ಸೈಡ್ ಎಂದು ಆಟೊ ಚಾಲಕ ಮರುಪ್ರಶ್ನೆ ಹಾಕುವ ಜೋಕನ್ನೂ ಸಹ ಹಂಚಿಕೊಂಡು ಟೀಕಿಸಿದ್ದಾರೆ.

