HomeKarnatakaBIGG NEWS : ದಾವಣಗೆರೆ ಮೂಲದ ಮೂವರ ಸಾವು ಪ್ರಕರಣ : ಅಮೆರಿಕಾದಲ್ಲೇ ಅಂತ್ಯಸಂಸ್ಕಾರ

BIGG NEWS : ದಾವಣಗೆರೆ ಮೂಲದ ಮೂವರ ಸಾವು ಪ್ರಕರಣ : ಅಮೆರಿಕಾದಲ್ಲೇ ಅಂತ್ಯಸಂಸ್ಕಾರ

ಬೆಂಗಳೂರು : ಅಮೆರಿಕಾದ ಮೇರಿಲ್ಯಾಂಡ ರಾಜ್ಯದ ಬಾಲ್ಟಿಮೋರ್ ನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದ ದಾವಣಗೆರೆ ಮೂಲದ ಮೂವರ ಅಂತ್ಯ ಸಂಸ್ಕಾರ ಅಮೆರಿಕಾದಲ್ಲಿ ನಡೆಸಲಾಗಿದೆ.

ದಾವಣಗೆರೆ ಮೂಲದ ಯೋಗೇಶ್ ಹೊನ್ನಾಳ, ಪತ್ನಿ ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಹೊನ್ನಾಳ ಆಗಸ್ಟ್ 15 ರಂದು ಅಮೆರಿಕಾದ ಮೇರಿಲ್ಯಾಂಡ ರಾಜ್ಯದ ಬಾಲ್ಟಿಮೋರ್ ನಲ್ಲಿರುವ ತಮ್ಮ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಮೃತರ ಅಂತ್ಯಕ್ರಿಯೆಯನ್ನು ಅಮೆರಿಕಾದಲ್ಲೇ ವೀರಶೈವ ಸಂಪ್ರದಾಯದಲ್ಲೇ ನೆರವೇರಿಸಲಾಗಿದೆ. ಅಂತ್ಯಸಂಸ್ಕಾರದಲ್ಲಿ ಯೋಗೇಶ್ ಹಾಗೂ ಪ್ರತಿಭಾ ಕುಟುಂಬಸ್ಥರು ಭಾಗಿಯಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಗಸ್ಟ್ 15ರಂದು ರಾತ್ರಿ ಪತ್ನಿ ಹಾಗೂ ಪುತ್ರನನ್ನ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ಯೋಗೇಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular