HomeKarnatakaBIGG NEWS : `RBI’ ನಿಂದ ಕರ್ನಾಟಕದ ಮತ್ತೊಂದು ಬ್ಯಾಂಕ್ ಗೆ ನಿರ್ಬಂಧ!

BIGG NEWS : `RBI’ ನಿಂದ ಕರ್ನಾಟಕದ ಮತ್ತೊಂದು ಬ್ಯಾಂಕ್ ಗೆ ನಿರ್ಬಂಧ!

ನವದೆಹಲಿ : ಹಣಕಾಸು ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ನ್ಯಾಷನಲ್ ಕೊ ಆಪರೇಟಿವ್ ಬ್ಯಾಂಕ್ ಗೆ ನಿರ್ಬಂಧ ಹೇರಿದೆ.

ಬೆಂಗಳೂರಿನ ನ್ಯಾಷನಲ್ ಕೊ ಆಪರೇಟಿವ್ ಬ್ಯಾಂಕ್ ದಿವಾಳಿಯಾಗುವ ಆತಂಕ ಎದುರಾಗಿದ್ದು, ಬ್ಯಾಂಕ್ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿ ಭಾರತೀಯ ರೀಸರ್ವ್ ಬ್ಯಾಂಕ್ ಆದೇಶಿಸಿದೆ. ದ ನ್ಯಾಷನಲ್ ಕೋ ಅಪರೇಟಿವ್ ಬ್ಯಾಂಕ್ ಬೆಂಗಳೂರಿನಲ್ಲಿ 12, ಮೈಸೂರಿನಲ್ಲಿ 1 ಶಾಖೆಯನ್ನು ಹೊಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1975 ರಲ್ಲಿ ಆರಂಭವಾಗಿರುವ ನ್ಯಾಷನಲ್ ಕೋ ಅಪರೇಟಿವ್ ಬ್ಯಾಂಕ್ ಬೆಂಗಳೂರು ಮತ್ತು ಮೈಸೂರಿನಲ್ಲಿ 13 ಶಾಖೆಗಳನ್ನು ಹೊಂದಿದೆ. ಈ ಬ್ಯಾಂಕ್ 1.04 ಲಕ್ಷ ಠೇವಣಿದಾರರನ್ನು ಹೊಂದಿದ್ದು, 1 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ.ಆದರೆ ಬ್ಯಾಂಕ್ ನಿಂದ 869 ಕೋಟಿಗೂ ಹೆಚ್ಚಿನ ಸಾಲ ನೀಡಲಾಗಿದ್ದು, ಅದರಲ್ಲಿ 500 ಕೋಟಿ ರೂ. ಸಾಲ ವಸೂಲಿ ಮಾಡಲಾಗಿದೆ. ಕಳೆದೊಂದು ವರ್ಷದಿಂದ ಬ್ಯಾಂಕ್ ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಹೀಗಾಗಿ ಬ್ಯಾಂಕಿನ ಮೇಲೆ ಕೆಲವೊಂದು ನಿರ್ಬಂಧ ಹೇರಿದ್ದು, ಹೊಸದಾಗಿ ಯಾವುದೇ ಸಾಲ ನೀಡಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular