HomeKarnataka`ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಇಂದು ಸಂಜೆ 4 ಗಂಟೆವರೆಗೆ ಅವಕಾಶ

`ರೇಷನ್ ಕಾರ್ಡ್’ ನಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಇಂದು ಸಂಜೆ 4 ಗಂಟೆವರೆಗೆ ಅವಕಾಶ

ಬೆಂಗಳೂರು : ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಪಡಿತರ ಕಾರ್ಡ್ ಗಳಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಆಗಸ್ಟ್ 24 ರವರೆಗೆ ಅವಕಾಶ ನೀಡಿದೆ.

ಪಡಿತರ ಕಾರ್ಡುಗಳಲ್ಲಿ ಕುಟುಂಬದ ಮುಖ್ಯಸ್ಥರ ತಿದ್ದುಪಡಿ ಹಾಗೂ ಸದಸ್ಯರ ಸೇರ್ಪಡೆ ಕ್ರಮಕ್ಕೆ ಆಹಾರ ತಂತ್ರಾಂಶದಲ್ಲಿ ಆಗಸ್ಟ್ 24ರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ಡುದಾರರು ಸಮೀಪದ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಸಿಎಸ್‌ಸಿ ಸೆಂಟರ್‌ಗಳಿಗೆ ಭೇಟಿ ನೀಡಿ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು.  ಈ ವರೆಗೂ ಇ-ಕೆವೈಸಿ ಮಾಡಿಸದ ಪಡಿತರ ಚೀಟಿದಾರರು ಹಾಗೂ ಸದಸ್ಯರು ಈ ತಿಂಗಳ ಅಂತ್ಯದವರೆಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular