BIGG NEWS : ಸ್ನಾತಕೋತ್ತರ ಪದವಿ ಪಡೆದ ʻಪ್ರೌಢಶಾಲೆ ಶಿಕ್ಷಕ ́ರಿಗೆ ಗುಡ್ ನ್ಯೂಸ್ : ಪಿಯು ಕಾಲೇಜು ಉಪನ್ಯಾಸಕ ಹುದ್ದೆ ಬಡ್ತಿಗೆ ಅವಕಾಶ

ಬೆಂಗಳೂರು :  ಸ್ನಾತಕೋತ್ತರ ಪದವಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರಿಗೆ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿನ ಉಪನ್ಯಾಸಕರ ಹುದ್ದೆಗೆ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರೇಡ್-2 ಸಹಶಿಕ್ಷಕರ ವೃಂದದಿಂದ ಉಪನ್ಯಾಸಕರ ವೃಂದಕ್ಕೆ ಬಡ್ತಿ ನೀಡಲು ಸ್ನಾತಕೋತ್ತರ ಪದವಿ ಪಡೆದಿರುವ ಗ್ರೇಡ್-2 ಸಹಶಿಕ್ಷಕರುಗಳ ಮಾಹಿತಿಯನ್ನು ನೀಡಲು ಉಲ್ಲೇಖಿತ ಪತ್ರದಲ್ಲಿ ಕೋರಿರುತ್ತಾರೆ.

ಜಿಲ್ಲಾ ಉಪನಿರ್ದೇಶಕರು(ಆಡಳಿತ) ರವರುಗಳಿಂದ ವಿವಿಧ ದಿನಾಂಕಗಳಂದು ಈ ಕಛೇರಿಗೆ ಸ್ವೀಕೃತವಾದ ಮಾಹಿತಿಯಂತೆ ಸ್ನಾತಕೋತ್ತರ ಪದವಿ ಪಡೆದಿರುವ ಶಿಕ್ಷಕರ ಮಾಹಿತಿಯನ್ನು ಕ್ರೂಢೀಕರಿಸಿ ಪಟ್ಟಿಯಲ್ಲಿ ನಮೂದಿಸಲಾಗಿರುತ್ತದೆ. ಬೆಂಗಳೂರು ವಿಭಾಗಕ್ಕೆ ಸಂಬಂಧಿಸಿದಂತೆ, ಜೇಷ್ಠತಾ ಪಟ್ಟಿಯ ಅನುಸಾರ ಸುಮಾರು 8344 ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದಿರುವ ಬಗ್ಗೆ ಮಾಹಿತಿ ಇರುತ್ತದೆ. ಆದರೆ ಜಿಲ್ಲೆಗಳಿಂದ ಬಂದಿರುವ ಮಾಹಿತಿಯಂತೆ ಶಿಕ್ಷಕರು ಅಂಕಪಟ್ಟಿಗಳನ್ನು ನೀಡಿರುವ ಮಾಹಿತಿಯಂತೆ 7704 ಶಿಕ್ಷಕರ ಮಾಹಿತಿಯನ್ನು ವಿಷಯವಾರು ನಮೂದಿಸಲಾಗಿರುತ್ತದೆ.

ಉಳಿದಂತೆ ಎಲ್ಲಾ ಜಿಲ್ಲೆಗಳು ಸೇರಿ 640 ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದಿರುವುದಾಗಿ ಸಹಶಿಕ್ಷಕರ ಜೇಷ್ಠತಾ ಪಟ್ಟಿ ತಯಾರಿಸುವ ಸಮಯದಲ್ಲಿ ನಮೂದಿಸಲಾಗಿದ್ದು, ಶಿಕ್ಷಕರಿಂದ ಅಂಕಪಟ್ಟಿ ದಾಖಲೆಗಳನ್ನು ನೀಡಿರುವ ಬಗ್ಗೆ ಜಿಲ್ಲೆ ಉಪನಿರ್ದೇಶಕರುಗಳು ಮಾಹಿತಿ ನೀಡಿರುವುದಿಲ್ಲ.

ಆದುದರಿಂದ ಈ ಪತ್ರದೊಂದಿಗೆ ಲಗತ್ತಿಸಿರುವ ಜಿಲ್ಲಾವಾರು ಪಟ್ಟಿಯಲ್ಲಿರುವ ಶಿಕ್ಷಕರು ಸ್ನಾತಕೋತ್ತರ ಪದವಿ ಪಡೆದಿರುವ ಬಗ್ಗೆ ವಿಷಯವಾರು ಮಾಹಿತಿಯನ್ನು 7 ದಿನಗಳೊಳಗಾಗಿ ಈ ಕಛೇರಿಗೆ ಮುದ್ದಾಂ ಸಲ್ಲಿಸಲು ತಿಳಿಸಿದೆ. ತಪ್ಪಿದ್ದಲ್ಲಿ ಮಾಹಿತಿಯನ್ನು ಸಲ್ಲಿಸದಿರುವ ಬಗ್ಗೆ ಮಾನ್ಯ ಆಯುಕ್ತರಿಗೆ ವರದಿ ಮಾಡಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read