ಬೆಂಗಳೂರು : ಕಿರುತೆರೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 5ರಂದು ಗ್ರ್ಯಾಂಡ್ ಓಪನಿಂಗ್ ಶೂಟಿಂಗ್ ನಡೆಯಲಿದ್ದು, ಈ ನಡುವೆ ದೊಡ್ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಹೊಸ ಪ್ರೋಮೋಗಳಲ್ಲಿನ ಸುಳಿವುಗಳ ಆಧಾರದ ಮೇಲೆ ಕೆಲವು ಸ್ಪರ್ಧಿಗಳ ಹೆಸರುಗಳು ಚರ್ಚೆಗೆ ಬಂದಿವೆ.
ಹೌದು. ಕನ್ನಡ ಕಿರುತೆರೆಯ ಬಹುನಿರೀಕ್ಷಿತ ‘ಬಿಗ್ ಬಾಸ್ ಕನ್ನಡ ಸೀಸನ್ 13’ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 6ರಂದು ಶೋ ಗ್ರ್ಯಾಂಡ್ ಓಪನಿಂಗ್ ಆಗಲಿದ್ದು, ದೊಡ್ಮನೆಗೆ ಯಾರೆಲ್ಲಾ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ.
ಹೊಸ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳ ಬಗ್ಗೆ ವೀಕ್ಷಕರು ತಮ್ಮದೇ ಆದ ಲೆಕ್ಕಾಚಾರ ಆರಂಭಿಸಿದ್ದಾರೆ. ಕೆಲವರು ಪ್ರೋಮೋದಲ್ಲಿರುವ ಸುಳಿವುಗಳ ಆಧಾರದ ಮೇಲೆ ಸಂಭಾವ್ಯ ಸ್ಪರ್ಧಿಗಳ ಹೆಸರುಗಳನ್ನು ಊಹಿಸುತ್ತಿದ್ದಾರೆ. ಆದರೆ ಪ್ರೋಮೋದಲ್ಲಿ ಕಾಣಿಸಿಕೊಂಡವರೇ ಅಂತಿಮ ಸ್ಪರ್ಧಿಗಳು ಎಂಬ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ
ಈ ನಡುವೆ ಪ್ರೋಮೋಗಳಲ್ಲಿನ ಸುಳಿವುಗಳಿಂದ ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಹೊರಬೀಳುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ಚರ್ಚೆ ಶುರುವಾಗಿದೆಸೆಪ್ಟೆಂಬರ್ 6ರಂದು ಶೋ ಆರಂಭವಾಗಲಿದ್ದು, ದೊಡ್ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳ ಬಗ್ಗೆ ಕುತೂಹಲ ಹೆಚ್ಚಿದೆ. ಈ ನಡುವೆ ಕಲರ್ಸ್ ಕನ್ನಡದ ಹೊಸ ಪ್ರೋಮೋಗಳಲ್ಲಿನ ಸುಳಿವುಗಳ ಆಧಾರದ ಮೇಲೆ ಕೆಲವು ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ರಿವೀಲ್ ಆಗಿದ್ದು, ಈ ಲಿಸ್ಟ್ ಇದೀಗ ಭಾರೀ ವೈರಲ್ ಆಗಿದೆ. ಈ ಬಾರಿ ‘ಅಗ್ನಿಪರೀಕ್ಷೆ’ಯಿಂದ ಆಯ್ಕೆಯಾಗುವ ಮೂವರು ಸ್ಪರ್ಧಿಗಳ ಜೊತೆಗೆ 15 ಸೆಲೆಬ್ರಿಟಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎನ್ನಲಾಗಿದೆ. ಆದರೆ ಸಂಪೂರ್ಣ ಅಧಿಕೃತ ಪಟ್ಟಿಯನ್ನು ವಾಹಿನಿ ಇನ್ನೂ ಬಹಿರಂಗಪಡಿಸಿಲ್ಲ.
ಕಲರ್ಸ್ ಕನ್ನಡದ ಪ್ರೋಮೋದಲ್ಲಿ ಕೆಲವು ಸ್ಪರ್ಧಿಗಳ ಮುಖವನ್ನು ಭಾಗಶಃ ತೋರಿಸಲಾಗಿದ್ದು, ಅವರ ಮುಖದ ಲಕ್ಷಣಗಳು ಹಾಗೂ ಇತರ ಸುಳಿವುಗಳನ್ನು ಗಮನಿಸಿ ಅಭಿಮಾನಿಗಳು ಹೆಸರುಗಳನ್ನು ಊಹಿಸುತ್ತಿದ್ದಾರೆ. ಈ ಪೈಕಿ ಸೌಂದರ್ಯ ಶೆಟ್ಟಿ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಹಿಂದಿಯ ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಸೌಂದರ್ಯ ಶೆಟ್ಟಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.
ಅದೇ ರೀತಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಯ ಶ್ರಾವಣಿ ಪಾತ್ರದ ಮೂಲಕ ಗಮನ ಸೆಳೆದ ಆಸಿಯಾ ಫಿರ್ದೋಸ್ ಅವರ ಹೆಸರು ಕೂಡ ಪ್ರೋಮೋದಲ್ಲಿನ ಸುಳಿವಿನಿಂದ ಮುನ್ನೆಲೆಗೆ ಬಂದಿದೆ. ಸಿನಿಮಾಗಳ ಮೂಲಕ ಪರಿಚಿತರಾಗಿರುವ ಡ್ರ್ಯಾಗನ್ ಮಂಜು ಅವರ ಹೆಸರೂ ಕೇಳಿಬರುತ್ತಿದೆ. ಇದರ ಜೊತೆಗೆ ತಾಂಡವ್ ರಾಮ್ ಹಾಗೂ ಸಂಗೀತಾ ಭಟ್ ಹೆಸರುಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮವು ಫ್ಲೈಟ್ ಥೀಮ್ನಲ್ಲಿ ಮೂಡಿಬರಲಿದೆ ಎನ್ನಲಾಗಿದ್ದು, ಸ್ಪರ್ಧಿಗಳನ್ನು ವಿವಿಧ ಹಂತಗಳಲ್ಲಿ ಇರಿಸುವ ಸಾಧ್ಯತೆಯೂ ಇದೆ. ಹೀಗಾಗಿ ಸೀಸನ್ 13ರಲ್ಲಿ ಯಾವ ರೀತಿಯ ಆಟ, ಟಾಸ್ಕ್‌ಗಳು ಮತ್ತು ಟ್ವಿಸ್ಟ್‌ಗಳು ಇರಲಿವೆ ಎಂಬ ಕುತೂಹಲ ಇದೀಗ ಹೆಚ್ಚಾಗಿದೆ.
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಒಂದೇ ದಿನ 5 ಭಾಷೆಗಳಲ್ಲಿ ಶೋ ಆರಂಭ!
ಸೆಪ್ಟೆಂಬರ್ 6, 2026ರಂದು ‘ಬಿಗ್ ಬಾಸ್’ ಐದು ಭಾರತೀಯ ಭಾಷೆಗಳಲ್ಲಿ ಏಕಕಾಲದಲ್ಲಿ ಆರಂಭವಾಗಲಿದೆ. ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳ ಬಿಗ್ ಬಾಸ್ ಸೀಸನ್‌ಗಳು ಒಂದೇ ದಿನ ಪ್ರೇಕ್ಷಕರ ಮುಂದೆ ಬರಲಿವೆ.
ಈ ಮೂಲಕ ‘ಬಿಗ್ ಬಾಸ್’ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಐದು ಭಾಷೆಗಳ ಆವೃತ್ತಿಗಳು ಒಂದೇ ದಿನ ಪ್ರೀಮಿಯರ್ ಆಗುತ್ತಿವೆ. ಹಿಂದಿಯಲ್ಲಿ ‘ಬಿಗ್ ಬಾಸ್ 20’, ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ 13’, ತೆಲುಗಿನಲ್ಲಿ ‘ಬಿಗ್ ಬಾಸ್ ತೆಲುಗು 10’, ತಮಿಳಿನಲ್ಲಿ ‘ಬಿಗ್ ಬಾಸ್ ತಮಿಳು 10’ ಹಾಗೂ ಮಲಯಾಳಂನಲ್ಲಿ ‘ಬಿಗ್ ಬಾಸ್ ಮಲಯಾಳಂ 8’ ಆರಂಭವಾಗಲಿದೆ.
ಆರು ಸೂಪರ್‌ಸ್ಟಾರ್‌ಗಳ ಸಾರಥ್ಯ
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಲವು ಜನಪ್ರಿಯ ಸ್ಟಾರ್‌ಗಳು ನಿರೂಪಕರಾಗಿ ಸಾಥ್ ನೀಡಲಿದ್ದಾರೆ. ಕಿಚ್ಚ ಸುದೀಪ್ ಕನ್ನಡ ಬಿಗ್ ಬಾಸ್‌ನ್ನು, ನಾಗಾರ್ಜುನ ತೆಲುಗು ಆವೃತ್ತಿಯನ್ನು, ವಿಜಯ್ ಸೇತುಪತಿ ತಮಿಳು ಬಿಗ್ ಬಾಸ್‌ನ್ನು ಹಾಗೂ ಮೋಹನ್‌ಲಾಲ್ ಮಲಯಾಳಂ ಬಿಗ್ ಬಾಸ್‌ನ್ನು ಮುನ್ನಡೆಸಲಿದ್ದಾರೆ. ಹಿಂದಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಿಸಲಿದ್ದಾರೆ.
ಇದರ ಅಂಗವಾಗಿ ದಕ್ಷಿಣ ಭಾರತದ ನಾಲ್ವರು ನಿರೂಪಕರಾದ ಸುದೀಪ್, ನಾಗಾರ್ಜುನ, ವಿಜಯ್ ಸೇತುಪತಿ ಮತ್ತು ಮೋಹನ್‌ಲಾಲ್ ಒಟ್ಟಿಗೆ ಕಾಣಿಸಿಕೊಂಡಿರುವ ವಿಶೇಷ ಪ್ರೋಮೋ ಕೂಡ ಗಮನ ಸೆಳೆದಿದೆ.
ಸೆಪ್ಟೆಂಬರ್ 6ಕ್ಕೆ ಕೌಂಟ್‌ಡೌನ್
ಬಿಗ್ ಬಾಸ್‌ನ ವಿವಿಧ ಭಾಷೆಗಳ ಸೀಸನ್‌ಗಳು ಒಂದೇ ದಿನ ಆರಂಭವಾಗುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಒಂದೇ ದಿನ ಹಲವು ಬಿಗ್ ಬಾಸ್ ಮನೆಗಳಲ್ಲಿ ಹೊಸ ಸ್ಪರ್ಧಿಗಳು, ಹೊಸ ಆಟ, ಹೊಸ ಟಾಸ್ಕ್‌ಗಳು ಹಾಗೂ ಭರಪೂರ ಮನರಂಜನೆ ಆರಂಭವಾಗಲಿದೆ.
ಬಿಗ್ ಬಾಸ್ ಕನ್ನಡ 13ರ ಗ್ರ್ಯಾಂಡ್ ಪ್ರೀಮಿಯರ್ ಸೆಪ್ಟೆಂಬರ್ 6ರಂದು ನಡೆಯಲಿದ್ದು, ಕಿಚ್ಚ ಸುದೀಪ್ ಮತ್ತೊಮ್ಮೆ ನಿರೂಪಕರಾಗಿ ಕಣಕ್ಕಿಳಿಯುತ್ತಿದ್ದಾರೆ.
ಒಟ್ಟಿನಲ್ಲಿ, ಸೆಪ್ಟೆಂಬರ್ 6 ಬಿಗ್ ಬಾಸ್ ಅಭಿಮಾನಿಗಳಿಗೆ ‘ಮೆಗಾ ಬಿಗ್ ಬಾಸ್ ಡೇ’ ಆಗಲಿದ್ದು, ಒಂದೇ ದಿನ ಐದು ಭಾಷೆಗಳ ಶೋಗಳು ಆರಂಭವಾಗುವುದು ಈ ರಿಯಾಲಿಟಿ ಶೋನ ಇತಿಹಾಸದಲ್ಲೇ ವಿಶೇಷ ದಾಖಲೆ ಎನ್ನಲಾಗುತ್ತಿದೆ.

