ಬಿಗ್ ಬಾಸ್ ಕನ್ನಡ ಸೀಸನ್ 13 ಆರಂಭವಾಗಿದ್ದು, ಮನೆಯೊಳಗೆ ಮೊದಲ ನಾಮಿನೇಷನ್ ಪ್ರಕ್ರಿಯೆಯೂ ನಡೆದಿದೆ. ಶೋ ಆರಂಭವಾದ ಕೆಲವೇ ಗಂಟೆಗಳಲ್ಲಿ ನಾಮಿನೇಷನ್ ನಡೆದಿದ್ದು, ವಿಮಾನದೊಳಗೆ ಉಳಿದಿರುವ ಸ್ಪರ್ಧಿಗಳೆಲ್ಲರೂ ನಾಮಿನೇಟ್ ಆಗಿದ್ದಾರೆ. ಆದರೆ ಇವರಲ್ಲಿ ಕೆಲವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆಯುವ ಅವಕಾಶವನ್ನೂ ಹೊಂದಿದ್ದಾರೆ.
ನಾಮಿನೇಟ್ ಆದವರು ಯಾರು?
ಮಂಜ, ಅವಿನಾಶ್, ಲಿಖಿತ್, ಧನುಷ್, ಕಿರಣ್ ಶಾಸ್ತ್ರಿ, ವೈಷ್ಣವಿ, ಸೌಂದರ್ಯಾ ಶೆಟ್ಟಿ ಮತ್ತು ಪ್ರಥಮಾ ಪ್ರಸಾದ್ ನಾಮಿನೇಷನ್ ಪಟ್ಟಿಗೆ ಸೇರಿದ್ದಾರೆ.
https://x.com/kalaavidanaanu/status/2097401085950599436
ಈ ಎಂಟು ಮಂದಿಯಲ್ಲಿ ಒಬ್ಬರು ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನವೇ ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ.
ಇನ್ನೊಂದೆಡೆ ಕಾವ್ಯಾ, ಸಂಗೀತಾ ಭಟ್, ಓಂ ಪ್ರಕಾಶ್ ರಾವ್, ಜಗ್ಗ ಮಮ್ಮಿ, ಗಗನ್ ಚಿನ್ನಪ್ಪ, ಆಸಿಯಾ, ತಾಂಡವ್ ರಾಮ್ ಮತ್ತು ಯಶಸ್ ಕೃಷ್ಣ ಈಗಾಗಲೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.
ಮನೆಯೊಳಗೆ ಇರುವ ಸ್ಪರ್ಧಿಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಫಲರಾದರೆ ಅವರನ್ನು ಮತ್ತೆ ವಿಮಾನದೊಳಗೆ ಕಳುಹಿಸಲಾಗುತ್ತದೆ. ಆಗ ಅವರೂ ನಾಮಿನೇಷನ್‌ಗೆ ಒಳಗಾಗುತ್ತಾರೆ. ಹೀಗಾಗಿ ವಿಮಾನದಲ್ಲಿರುವ ಸ್ಪರ್ಧಿಗಳಿಗೆ ಈಗ ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳುವ ಒತ್ತಡ ಎದುರಾಗಿದೆ.
ನಾಮಿನೇಷನ್ ಪ್ರಕ್ರಿಯೆಯ ಭಾಗವಾಗಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ವಿಶೇಷ ಟಾಸ್ಕ್ ನೀಡಲಾಗಿತ್ತು. ಒಂದು ಬಾಕ್ಸ್‌ನಲ್ಲಿ ಡೈಮಂಡ್ ಹಾಗೂ ನೇರವಾಗಿ ನಾಮಿನೇಟ್ ಮಾಡುವಂತಹ ಬಿಗ್ ಸೀಕ್ರೆಟ್ ಇಡಲಾಗಿತ್ತು.
ತಮ್ಮ ಬಳಿ ಡೈಮಂಡ್ ಇರುವ ವಿಚಾರವನ್ನು ಇತರರಿಗೆ ತಿಳಿಸಬಾರದು ಎಂಬುದು ಈ ಟಾಸ್ಕ್‌ನ ಪ್ರಮುಖ ನಿಯಮವಾಗಿತ್ತು. ಡೈಮಂಡ್ ಇರುವ ಬಾಕ್ಸ್‌ನ ಗುಟ್ಟು ಹೊರಬಂದರೆ, ಆ ಬಾಕ್ಸ್ ಹೊಂದಿರುವ ಸ್ಪರ್ಧಿ ನೇರವಾಗಿ ನಾಮಿನೇಷನ್‌ಗೆ ಹೋಗಬೇಕಾಗಿತ್ತು.
ಈ ಟಾಸ್ಕ್‌ನಲ್ಲಿ ಗಗನ್ ಚಿನ್ನಪ್ಪ ಅವರಿಗೆ ಡೈಮಂಡ್ ಇರುವ ಬಾಕ್ಸ್ ಸಿಕ್ಕಿತ್ತು. ಆದರೆ ಈ ವಿಚಾರವನ್ನು ಅವರು ಯಾರಿಗೂ ತಿಳಿಯದಂತೆ ನೋಡಿಕೊಂಡಿದ್ದಾರೆ. ತಮ್ಮ ಬಳಿ ಡೈಮಂಡ್ ಇಲ್ಲ ಎಂಬಂತೆ ವರ್ತಿಸಿ, ಅನುಮಾನ ಬೇರೆ ಸ್ಪರ್ಧಿಗಳ ಮೇಲೆ ಬರುವಂತೆ ಮಾಡಿದ್ದಾರೆ.
ಈ ವೇಳೆ ಗಗನ್ ಚಿನ್ನಪ್ಪ ಅವರು ಆಸಿಯಾ ಮೇಲೆ ಅನುಮಾನ ಮೂಡುವಂತೆ ಮಾಡಿದ್ದು, ಮನೆಯೊಳಗೆ ಅವರ ಬಗ್ಗೆ ಚರ್ಚೆ ಶುರುವಾಗಿದೆ. ಮುಂದೆ ಈ ಸೀಕ್ರೆಟ್ ಹೇಗೆ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

