HomeIndiaBIG UPDATE : ದೆಹಲಿ 'IAS' ಕೋಚಿಂಗ್ ಸೆಂಟರ್ ನಲ್ಲಿ ಮೂವರ ಸಾವು ಕೇಸ್ ;...

BIG UPDATE : ದೆಹಲಿ ‘IAS’ ಕೋಚಿಂಗ್ ಸೆಂಟರ್ ನಲ್ಲಿ ಮೂವರ ಸಾವು ಕೇಸ್ ; ಇದುವರೆಗೆ 7 ಮಂದಿ ಅರೆಸ್ಟ್..!

ನವದೆಹಲಿ: ರಾಜಿಂದರ್ ನಗರದ ಕೋಚಿಂಗ್ ಸೆಂಟರ್ನ ನೆಲಮಾಳಿಗೆಯಲ್ಲಿ ಮುಳುಗಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇನ್ನೂ ಐದು ಜನರನ್ನು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ 7ಕ್ಕೇರಿಕೆಯಾಗಿದೆ.

ದೆಹಲಿಯ ಓಲ್ಡ್ ರಾಜಿಂದರ್ ನಗರ ಏರಿಯಾದಲ್ಲಿರುವ ಐಎಎಸ್ ತರಬೇತಿ ಕೇಂದ್ರಕ್ಕೆ ಏಕಾಏಕಿ ಪ್ರವಾಹದಂತೆ ನೀರು ನುಗ್ಗಲಾರಂಭಿಸಿದೆ. ತರಬೇತಿ ಕೇಂದ್ರ ನೆಲಮಾಳಿಗೆಯಲ್ಲಿದ್ದು, ನೆಲಮಾಳಿಗೆ ಕ್ಷಣಾರ್ಧದಲ್ಲಿ ಸಂಪೂರ್ಣ ಜಲಾವೃತಗೊಂಡಿದೆ. ನೆಲಮಾಳಿಗೆಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ  ಸಾವನ್ನಪ್ಪಿದ್ದರು.ದುರಂತದಲ್ಲಿ ಮೃತಪಟ್ಟವರನ್ನು 25 ವರ್ಷದ ತಾನ್ಯಾ ಸೋನಿ, ಉತ್ತರ ಪ್ರದೇಶ ಮೂಲದ ಶ್ರೇಯಾ ಯಾದವ್ ಹಾಗೂ 28 ವರ್ಷದ ನವೀನ್ ದಲ್ವಿನಿ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular