HomeIndiaBIG UPDATE : ಮಹಾರಾಷ್ಟ್ರದಲ್ಲಿ ಭೀಕರ 'ಕರ್ನಾಟಕ ಎಕ್ಸ್ ಪ್ರೆಸ್ ರೈಲು' ದುರಂತ : ಸಾವಿನ...

BIG UPDATE : ಮಹಾರಾಷ್ಟ್ರದಲ್ಲಿ ಭೀಕರ ‘ಕರ್ನಾಟಕ ಎಕ್ಸ್ ಪ್ರೆಸ್ ರೈಲು’ ದುರಂತ : ಸಾವಿನ ಸಂಖ್ಯೆ 13 ಕ್ಕೆ ಏರಿಕೆ |WATCH VIDEO

ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಕರ್ನಾಟಕ ಎಕ್ಸ್ ಪ್ರೆಸ್ ರೈಲು ಹರಿದು ಸಾವನ್ನಪ್ಪಿದವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.

ಪುಷ್ಪಕ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ತಗುಲಿದ್ದು, ನಂತರ ಜೀವ ಭಯದಿಂದ ಹಾರುವ ಪ್ರಯತ್ನದಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.ದುರಂತದಲ್ಲಿ 13 ಪ್ರಯಾಣಿಕರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಜಲ್ಗಾಂವ್ನ ಪಚೋರಾ ರೈಲು ನಿಲ್ದಾಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಪುಷ್ಪಕ್ ಎಕ್ಸ್ ಪ್ರೆಸ್ನಲ್ಲಿ ಬೆಂಕಿ ಕಾಣಿಸಿಕೊಂಡ ವದಂತಿಯ ನಂತರ ಅವ್ಯವಸ್ಥೆ ಉಂಟಾಯಿತು. ಭಯಭೀತರಾದ ಪ್ರಯಾಣಿಕರು ತಮ್ಮ ಜೀವಕ್ಕೆ ಹೆದರಿ ಚಲಿಸುವ ರೈಲಿನಿಂದ ಜಿಗಿದಿದ್ದಾರೆ. ಪಕ್ಕದ ಟ್ರ್ಯಾಕ್ ಗೆ ಜಿಗಿದಾಗ ಮತ್ತೊಂದು ರೈಲು ಹರಿದು ಅನೇಕರು ಸಾವನ್ನಪ್ಪಿದ್ದಾರೆ.ಪುಷ್ಪಕ್ ಎಕ್ಸ್ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚೈನ್ ಏಳೆದು ರೈಲನ್ನು ನಿಲ್ಲಿಸಲಾಗಿದೆ. ಈ ವೇಳೆ ರೈಲಿನಿಂದ ಅನೇಕ ಪ್ರಯಾಣಿಕರು ಕೆಳಗೆ ಜಿಗಿದಿದ್ದಾರೆ. ಕರ್ನಾಟಕ ಎಕ್ಸ್ ಪ್ರೆಸ್ ರೈಲು ಬರುತ್ತಿರುವುದನ್ನು ತಿಳಿಯದೇ ಟ್ರ್ಯಾಕ್ ಮೇಲೆ ನಿಂತಿದ್ದು, ಮತ್ತೊಂದು ರೈಲು ಡಿಕ್ಕಿಯಾಗಿ ದುರಂತ ಸಂಭವಿಸಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular