ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಚಿತ್ರ ಈಗಾಗಲೇ ತನ್ನ ಹಾಡಿನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಮತ್ತೊಂದು ಹಾಡನ್ನು ಸಹ ಬಿಡುಗಡೆ ಮಾಡುವುದಾಗಿ ಪ್ಲಾನ್ ಮಾಡಿದೆ.
ಇದರ ಬೆನ್ನಲ್ಲೇ ಇದೀಗ ‘ಗೇಮ್ ಚೇಂಜರ್’ ಚಿತ್ರತಂಡ ಇಂದು ಮತ್ತೊಂದು ಸರ್ಪ್ರೈಸ್ ನೀಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ಬಿಡುಗಡೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದ್ದು, ರಾಮ್ ಚರಣ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಈ ಚಿತ್ರವನ್ನು ರಾಜು ಶಿರೀಷ್ ನಿರ್ಮಾಣ ಮಾಡಿದ್ದು, ರಾಮ್ ಚರಣ್ ಗೆ ಜೋಡಿಯಾಗಿ ಕಿಯಾರ ಅಡ್ವಾಣಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಅಂಜಲಿ, ಸಮುದ್ರಕಣಿ, ಎಸ್‌ಜೆ ಸೂರ್ಯ, ಶ್ರೀಕಾಂತ್, ಸುನಿಲ್ ಉಳಿದ ತಾರಂಗಣದಲ್ಲಿದ್ದಾರೆ. ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದು, ಸಾಯಿ ಮಾಧವ್ ಬುರ್ರಾ ಸಂಭಾಷಣೆ, ಅಂಬರೀವ್ ಸಾಹಸ ನಿರ್ದೇಶನ ಮತ್ತು ಎಸ್ ತಿರುನಾವುಕ್ಕರಸು ಛಾಯಾಗ್ರಹಣವಿದೆ.
https://twitter.com/telugufilmnagar/status/1839236194283991259