ಜಮ್ಮು-ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಉರುಳಿ ಬಿದ್ದು ನಾಲ್ವರು ಯೋಧರು ಹುತಾತ್ಮರಾಗಿದ್ದು, 31 ಮಂದಿಗೆ ಗಾಯಗಳಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಬ್ರೈಲ್ ವಾಟರ್ಹೆಲ್ ಪ್ರದೇಶದಲ್ಲಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 31 ಮಂದಿ ಗಾಯಗೊಂಡಿದ್ದಾರೆ. ಬಸ್ಸಿನಲ್ಲಿದ್ದ 35 ಬಿಎಸ್ಎಫ್ ಸಿಬ್ಬಂದಿಗಳಲ್ಲಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬದ್ಗಾಮ್ನ ಬ್ರಿಲ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.
ಬಸ್ ಪರ್ವತ ರಸ್ತೆಯಿಂದ ಜಾರಿ ದೊಡ್ಡ ಹಳ್ಳಕ್ಕೆ ಬಿದ್ದಿದೆ. ಗಾಯಗೊಂಡ ಎಲ್ಲಾ ಬಿಎಸ್ಎಫ್ ಸೈನಿಕರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
https://twitter.com/ANI/status/1837127911842926959?ref_src=twsrc%5Etfw%7Ctwcamp%5Etweetembed%7Ctwterm%5E1837127911842926959%7Ctwgr%5E1743225dd7ab907cd564ce918353b6f2312277df%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fforyou%3Fmode%3Dpwalaunch%3Dtrue