ಬೆಂಗಳೂರು : ದಸರಾ ಹಬ್ಬಕ್ಕೆ ಊರಿಗೆ ಹೊರಟವರಿಗೆ ಬಿಗ್ ಶಾಕ್ ಎದುರಾಗಿದ್ದು, ಖಾಸಗಿ ಬಸ್ ಹಾಗೂ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ದರ ಹೆಚ್ಚಳವಾಗಿದೆ.
ಹೌದು. ಬೆಂಗಳೂರು- ಮೈಸೂರು ಟಿಕೆಟ್ ದರ ಹೆಚ್ಚಳವಾಗಿದ್ದು, ಬಸ್ ಟಿಕೆಟ್ ದರದಲ್ಲಿ 20 ರೂ ಏರಿಕೆ ಮಾಡಲಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ದರ ಏರಿಕೆಯಾಗಿದೆ. ಟಿಕೆಟ್ ದರ 19 ರೂಪಾಯಿ ಹೆಚ್ಚಳ ಮಾಡಲಾಗಿದೆ. ದಸರಾ ಹಬ್ಬಕ್ಕೂ ಮುನ್ನ ಬಸ್ ಟಿಕೆಟ್ ದರ 161 ರೂಪಾಯಿ ಇತ್ತು. ಇದೀಗ 19 ರೂಪಾಯಿ ಏರಿಕೆಯಾಗಿದ್ದು, ಬೆಂಗಳೂರು-ಮೈಸೂರು ಬಸ್ ಟಿಕೆಟ್ ದರ 180ಕ್ಕೆ ಏರಿಕೆಯಾಗಿದೆ.
ಖಾಸಗಿ ಬಸ್ ಗಳಿಂದ ಸುಲಿಗೆ
ಹಬ್ಬ ಹರಿದಿನಗಳು ಬಂದರೆ ಸಾಕು ಖಾಸಗಿ ಬಸ್ ಗಳು ಸುಲಿಗೆ ಮಾಡಲು ಶುರು ಮಾಡುತ್ತದೆ. ಖಾಸಗಿ ಬಸ್ ಗಳು ಕೂಡ ದಸರಾ ಹಬ್ಬದ ಹಿನ್ನೆಲೆ ಟಿಕೆಟ್ ದರ ಹೆಚ್ಚಿಸಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ 1000 ರಿಂದ 2039 ರೂ ಹೆಚ್ಚಳ ಮಾಡಿದೆ. ಬೆಂಗಳೂರಿನಿಂದ ದಾವಣಗೆರೆಗೆ 750 ರಿಂದ 1489 ರೂ ಹೆಚ್ಚಳ ಮಾಡಿದೆ. ಬೆಂಗಳೂರಿನಿಂದ ಬೆಳಗಾವಿಗೆ 1200 ರೂ ಯಿಂದ 2677 ರವರೆಗೆ ಏರಿಕೆ ಮಾಡಲಾಗಿದೆ ಎನ್ನಲಾಗಿದೆ.