ಬೆಂಗಳೂರು: ಬೆಂಗಳೂರಿನ ಜನತೆಗೆ ಇಂದು ಕರೆಂಟ್ ಶಾಕ್ ತಟ್ಟಲಿದೆ. ಬೆಂಗಳೂರಿನಲ್ಲಿ ಇಂದು ಬಹುತೇಕ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 100ಕ್ಕೂ ಹೆಚ್ಚು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗುವುದು.
ಶನಿವಾರ ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳಿಸಲಾಗುವುದು. ಬೆಸ್ಕಾಂ ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಬನಶಂಕರಿ, ಜಯನಗರ, ತಿಲಕ್ ನಗರ, ಜಯದೇವ ಆಸ್ಪತ್ರೆ, ಬಸವನಗುಡಿ, ಕತ್ರಿಗುಪ್ಪೆ, ಬಿಟಿಎಂ ಲೇಔಟ್, ಶ್ರೀನಗರ, ಬ್ಯಾಂಕ್ ಕಾಲೋನಿ, ಉತ್ತರಹಳ್ಳಿ, ಗಿರಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಬೆಸ್ಕಾಂ ತುರ್ತು ನಿರ್ವಹಣೆ ಕಾಮಗಾರಿ ಹಿನ್ನೆಲೆ ವಿದ್ಯುತ್ ಕಡಿತ ಮಾಡಲಾಗುವುದು.
ಬೆಸ್ಕಾಂ ಪಶ್ಚಿಮ ವೃತ್ತದ ಹಲವು ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಶನಿವಾರ ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ರಾಜರಾಜೇಶ್ವರಿ ನಗರದ ಪಟ್ಟಣಗೆರೆ, ಬಿಎಚ್ಇಎಲ್, ಉತ್ತರಹಳ್ಳಿ ಮುಖ್ಯರಸ್ತೆ, ಶ್ರೀನಿವಾಸ ಕಾಲೋನಿ, ಹೆಮ್ಮಿಗೆಪುರ, ಬನಶಂಕರಿ, ಹನುಮಂತನಗರ, ಚಾಮರಾಜಪೇಟೆ, ಗಿರಿನಗರ, ಶ್ರೀ ನಗರ, ಹೊಸ ಕೆರೆಹಳ್ಳಿ, ಪಿಇಎಸ್ ಕಾಲೇಜು, ಬ್ಯಾಟರಾಯನಪುರ, ಟೆಲಿಕಾಂ ಲೇಔಟ್ ಮತ್ತಿತರ ಪ್ರದೇಶಗಳಲ್ಲಿ ಉಂಟಾಗಲಿದೆ, ಮೈಸೂರು ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳುಮ ಸಿಟಿ ಮಾರ್ಕೆಟ್, ಅವೆನ್ಯೂ ರೋಡ್, ಚಿಕ್ಕಪೇಟೆ, ಗೋರಿ ಪಾಳ್ಯ, ಕಲಾಸಿಪಾಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

