ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಶೇಕಡ 8ರಿಂದ 12ರವರೆಗೆ ಹೆಚ್ಚಿಸಲು ನಿರ್ಧರಿಸಿವೆ.
2026- 27ನೇ ಸಾಲಿಗೆ ಶಾಲಾ ಶುಲ್ಕವನ್ನು ಶೇಕಡ 8ರಿಂದ 12ರವರೆಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ನೀರು, ವಿದ್ಯುತ್ ಶುಲ್ಕ, ಸಿಬ್ಬಂದಿ ವೇತನ ಹೆಚ್ಚಳ, ವೃತ್ತಿಪರ ತೆರಿಗೆ, ಪಿಎಫ್. ಇಎಸ್ಐ ಭರಿಸುವುದು ಇತರೆ ಕಾರಣಗಳಿಂದ ಆದಾಯ ಕುಂಠಿತವಾಗಿರುವುದರಿಂದ ವೆಚ್ಚ ಭರಿಸಲು ಕೆಲವು ಶಾಲೆಗಳು ಶುಲ್ಕ ಹೆಚ್ಚಳದ ಮೊರೆ ಹೋಗಿವೆ.
ಸಾಮಾನ್ಯವಾಗಿ ಪ್ರತಿವರ್ಷ ಶೇಕಡ 2ರಿಂದ 4ರವರೆಗೆ ಮಾತ್ರ ಶುಲ್ಕ ಹೆಚ್ಚಳ ಮಾಡಲಾಗುತ್ತಿತ್ತು. ಕಡಿಮೆ ಶುಲ್ಕ ಪಡೆಯುವ ಕೆಲವು ಶಾಲೆಗಳು ವಾರ್ಷಿಕ 25 ರಿಂದ 30 ಸಾವಿರ ರೂ. ಶುಲ್ಕ ಪಡೆಯುತ್ತಿದ್ದು, ಶೇಕಡ 10ರಷ್ಟು ಶುಲ್ಕ ಹೆಚ್ಚಳ ಮಾಡಿದರೆ ಪೋಷಕರು 2500 ರೂ.ನಷ್ಟು ಹೆಚ್ಚು ಹಣ ಭರಿಸಬೇಕಾಗುತ್ತದೆ.

