ಬೆಂಗಳೂರು: ಬೆಂಗಳೂರು–ನಿಡಘಟ್ಟ (NH-275) ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಜುಲೈ 21ರಿಂದ ಟೋಲ್ ದರ ಏರಿಕೆಯ ಬಿಸಿ ತಟ್ಟಿದೆ. ಕನಿಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ಟೋಲ್ ದರಗಳು ಜಾರಿಗೆ ಬಂದಿದ್ದು, ಕಾರು ಸೇರಿದಂತೆ ಲಘು ವಾಹನಗಳ ಏಕಮುಖ ಪ್ರಯಾಣದ ಶುಲ್ಕ ₹180ರಿಂದ ₹185ಕ್ಕೆ ಹೆಚ್ಚಿಸಲಾಗಿದೆ. ಸ್ಥಳೀಯ ನಿವಾಸಿಗಳ ಮಾಸಿಕ ಪಾಸ್ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ಮಾಡಿಲ್ಲ.ಜುಲೈ 21ರ ಮಧ್ಯರಾತ್ರಿ 12 ಗಂಟೆಯಿಂದ ಹೊಸ ಟೋಲ್ ದರಗಳು ಜಾರಿಗೆ ಬಂದಿವೆ.
ಈ ಪರಿಷ್ಕೃತ ದರಗಳು ಬೆಂಗಳೂರು ನಗರ ಜಿಲ್ಲೆಯ ಕನಿಮಿಣಿಕೆ ಗ್ರಾಮದ ಬಳಿಯ ಕನಿಮಿಣಿಕೆ ಟೋಲ್ ಪ್ಲಾಜಾ ಹಾಗೂ ಬೆಂಗಳೂರು ದಕ್ಷಿಣದ ಶೇಷಗಿರಿಹಳ್ಳಿ ಗ್ರಾಮದ ಬಳಿಯ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ, ಆರು ಪಥಗಳ ಬೆಂಗಳೂರು–ನಿಡಘಟ್ಟ (NH-275) ಹೆದ್ದಾರಿ ಬಳಸುವ ವಾಹನಗಳಿಗೆ ಅನ್ವಯವಾಗಲಿವೆ.
ಹೊಸ ದರಗಳ ಪ್ರಕಾರ, ಕಾರು, ಜೀಪ್, ವ್ಯಾನ್ ಹಾಗೂ ಲಘು ಮೋಟಾರು ವಾಹನಗಳ (LMV) ಏಕಮುಖ ಪ್ರಯಾಣದ ಟೋಲ್ ಶುಲ್ಕ ₹180ರಿಂದ ₹185ಕ್ಕೆ ಹೆಚ್ಚಿಸಲಾಗಿದೆ.24 ಗಂಟೆಗಳೊಳಗೆ ಮಾನ್ಯವಾಗಿರುವ ರಿಟರ್ನ್ (ಹಿಂತಿರುಗುವ) ಪ್ರಯಾಣದ ಟೋಲ್ ದರವನ್ನು ₹275ಕ್ಕೆ ಏರಿಸಲಾಗಿದೆ. ತಿಂಗಳಿಗೆ 50 ಏಕಮುಖ ಪ್ರಯಾಣಗಳಿಗೆ ನೀಡಲಾಗುವ ಮಾಸಿಕ ಪಾಸ್ ದರವನ್ನು ₹5,940ರಿಂದ ₹6,100ಕ್ಕೆ ಪರಿಷ್ಕರಿಸಲಾಗಿದೆ.
ಕಾರುಗಳು, ಜೀಪುಗಳು, ವ್ಯಾನ್‌ಗಳು ಮತ್ತು ಹಗುರ ಮೋಟಾರು ವಾಹನಗಳ (LMV) ಒಂದು ಬಾಗದ ಪ್ರಯಾಣದ ಟೋಲ್ ಶುಲ್ಕವನ್ನು ₹180 ರಿಂದ ₹185 ಕ್ಕೆ ಹೆಚ್ಚಿಸಲಾಗಿದೆ. 24 ಗಂಟೆಯೊಳಗೆ ಹಿಂತಿರುಗುವ ಪ್ರಯಾಣದ ಶುಲ್ಕವನ್ನು ₹275 ಕ್ಕೆ ಏರಿಸಲಾಗಿದೆ, ಹಾಗೆಯೇ 50 ಏಕಮುಖ ಪ್ರಯಾಣಗಳನ್ನು ಒಳಗೊಂಡ ಮಾಸಿಕ ಪಾಸ್ ದರವನ್ನು ₹5,940 ರಿಂದ ₹6,100 ಕ್ಕೆ ಪರಿಷ್ಕರಿಸಲಾಗಿದೆ. ಆದರೆ, ಟೋಲ್ ಪ್ಲಾಜಾದಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ಸ್ಥಳೀಯ ನಿವಾಸಿಗಳಿಗೆ ನೀಡಲಾಗುವ ಸ್ಥಳೀಯ ಮಾಸಿಕ ಪಾಸ್ ದರ ₹360 ಆಗಿಯೇ ಮುಂದುವರಿಯಲಿದೆ.

