HomeKarnatakaBIG NEWS : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ : 'ಕೇಂದ್ರ ತನಿಖಾ' ತಂಡಗಳಿಂದ ತೀವ್ರಗೊಂಡ...

BIG NEWS : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ : ‘ಕೇಂದ್ರ ತನಿಖಾ’ ತಂಡಗಳಿಂದ ತೀವ್ರಗೊಂಡ ಶೋಧ

ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿವಿಧ ತನಿಖಾ ತಂಡಗಳು ಘಟನಾ ಸ್ಥಳಕ್ಕ ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ತಡರಾತ್ರಿಯವರೆಗೂ ಕೇಂದ್ರ ಗುಪ್ತಚರ ಇಲಾಖೆ ಭೇಟಿ ನೀಡಿದ್ದು ತೀವ್ರ ಶೋಧ ನಡೆಸುತ್ತಿದೆ. ಎಫ್ಎಸ್ಎಲ್, ಸೊಕೋ ಟೀಮ್, ಬಾಂಬ್ ಸ್ಕ್ವಾಡ್ನಿಂದಲೂ ಶೋಧ ನಡೆಯುತ್ತಿದೆ.

ಇನ್ನು ಬಾಂಬ್‌ ಸ್ಪೋಟ ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಸಿಸಿಟಿವಿಯಲ್ಲಿ ಶಂಕಿತ ಆರೋಪಿಯ ಚಲವಲನಗಳನ್ನು ಗಮನಿಸಿದ್ದಾರೆ. ಆರೋಪಿ ಟೋಪಿ ಹಾಕಿಕೊಂಡಿದ್ದು, ಕಪ್ಪು ಬಣ್ಣದ ಮಾಸ್ಕ್‌ ಜೊತೆಗೆ ಬ್ಯಾಗ್‌ ಹಾಕಿಕೊಂಡು ಬಾಂಬ್‌ ಇಟ್ಟು ಪರಾರಿಯಾಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ರಾಮೇಶ್ವರಂ ಕೆಫೆ ಬಂದು ರವಿ ಇಡ್ಲಿ ಆರ್ಡರ್‌ ಮಾಡಿ ಅದನ್ನು ತಿಂದು ಬಳಿಕ ಅಲ್ಲೇ ಬಾಂಬ್‌ ಇಟ್ಟು ಹೋಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular