ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಪ್ರಕ್ರಿಯೆಯನ್ನು ಮುಂದಿನ 15 ದಿನಗಳಲ್ಲಿ ಆರಂಭಿಸಲಾಗುವುದು ಎಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡುವ ಪ್ರಕ್ರಿಯೆಯನ್ನು ಮುಂದಿನ 15 ದಿನಗಳಲ್ಲಿ ಆರಂಭಿಸಲಾಗುವುದು ಇದಕ್ಕಾಗಿ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಬಿ-ಖಾತಾ ಹೊಂದಿರುವವರು ಅಥವಾ ಯಾವುದೇ ಖಾತಾ ಇಲ್ಲದವರು ಎ-ಖಾತಾ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಖಾತಾ ನೀಡುವಲ್ಲಿ ಯಾವುದೇ ರೀತಿಯ ಮಧ್ಯವರ್ತಿಗಳಿಲ್ಲದಂತೆ ಆನ್ಲೈನ್ ವ್ಯವಸ್ಥೆ ಮಾಡಲಾಗುವುದು. ಬಿಬಿಎಂಪಿಗೆ ಕಚೇರಿಗೆ ಹೋಗದೆಯೇ ಎ-ಖಾತಾ ಪಡೆಯುವಂತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇ ಖಾತಾ’ ಪಡೆಯಲು ಎಷ್ಟು ಹಣ ಪಾವತಿಸಬೇಕು..?
BBMPeAasthi.karnataka.gov.in ನಲ್ಲಿ ನೀವೇ ಸ್ವತ ಅಂತಿಮ ಇ ಖಾತಾ ಡೌನ್ ಲೋಡ್ ಮಾಡಿಕೊಳ್ಳಲು ರೂ.125.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಸೇವೆಯನ್ನು ಪಡೆಯಲು (ಬಿ.ಬಿ.ಎಂ.ಪಿ ಗೆ ರೂ. 125/- + ಬಿ-ಒನ್ಗೆ ಸೇವಾ ಶುಲ್ಕವನ್ನು ರೂ. 45/- ಮತ್ತು ಪ್ರತಿ ಪುಟದ ಸ್ಕ್ಯಾನ್ಗಾಗಿ ರೂ. 5/-) ಪಾವತಿಸುವುದು.
ಜನಸೇವಕರ ಮೂಲಕ ನಿಮ್ಮ ಮನೆ ಬಾಗಿಲಿಗೆ ಇ-ಖಾತಾ ಸೇವೆಯನ್ನು ಪಡೆಯಲು (ಬಿ.ಬಿ.ಎಂ.ಪಿ ಗೆ ರೂ.125/- ಹಾಗೂ ಜನಸೇವಕ ಶುಲ್ಕ[45+115]=160/-ಮತ್ತು ಪ್ರತಿ ಪುಟದ ಸ್ಕ್ಯಾನ್ಗಾಗಿ ರೂ. 5/-) ಪಾವತಿಸುವುದು.
ಜನಸೇವಕರಿಂದ ಸೇವೆ ಪಡೆಯಲು ಕರೆ ಮಾಡಿ 080 – 4920 3888 ಅಥವಾ ಆನ್ಲೈನ್ ಮೂಲಕ ಬುಕ್ ಮಾಡಲು @https://janasevaka.karnataka.gov.in
ಈ ದಾಖಲೆಗಳ ಜೊತೆ ಸಿದ್ದವಿರಿ
ಮಾಲೀಕರ ಆಧಾರ್
ಆಸ್ತಿ ತೆರಿಗೆ ಎಸ್.ಎ.ಎಸ್. ಅರ್ಜಿ ಸಂಖ್ಯೆ
ಸ್ವತ್ತಿನ ಕ್ರಯ/ನೋಂದಾಯಿತ ಪತ್ರ ಸಂಖ್ಯೆ (ಕಾವೇರಿ ತಂತ್ರಾಂಶದಿಂದ ವಿದ್ಯುನ್ಮಾನವಾಗಿ ಪಡೆದುಕೊಳ್ಳುತ್ತದೆ)
ಬೆಸ್ಕಾಂ ಖಾತೆ ಸಂಖ್ಯೆ (ಖಾಲಿ ನಿವೇಶನಗಳಿಗೆ ಅಗತ್ಯವಿಲ್ಲ)
ಸ್ವತ್ತಿನ ಛಾಯಾಚಿತ್ರ
ಇ-ಖಾತಾ ಸಹಾಯವಾಣಿಗೆ ಕರೆ ಮಾಡಿ (94806 83695) ಮಾಹಿತಿ ಪಡೆಯಬಹುದು.
(ii) a fresh/new A-Khata if they do not have any khata at present.
— Bruhat Bengaluru Mahanagara Palike (@BBMPofficial) July 28, 2025
DO NOT GO TO ANY BBMP OFFICE & DO NOT APPROACH ANY MIDDLEMEN
DO NOT BRIBE ANYONE
ONLINE SYSTEM WILL BE ROLLED OUT SOON.
M Maheshwar Rao, IAS,
Chief Commissioner, #BBMP#DKShivakumar #bbmpchiefcommissioner