HomeLatest NewsBIG NEWS: ವೈದ್ಯರಿಗೆ ವೃತ್ತಿ ಪ್ರಮಾಣ ಪತ್ರ, ಕ್ಲಿನಿಕ್ ನೋಂದಣಿ ಕಡ್ಡಾಯ

BIG NEWS: ವೈದ್ಯರಿಗೆ ವೃತ್ತಿ ಪ್ರಮಾಣ ಪತ್ರ, ಕ್ಲಿನಿಕ್ ನೋಂದಣಿ ಕಡ್ಡಾಯ

ಸರ್ಕಾರದ ಮಾರ್ಗಸೂಚಿಗಳನುಸಾರ ಜಿಲ್ಲೆಯಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವವರು ಕೆಎಯುಪಿ ಮಂಡಳಿ ನೋಂದಣಿ ಪ್ರಮಾಣ ಪತ್ರ ಹೊಂದಿರುವುದು ಮತ್ತು ಕ್ಲಿನಿಕ್‍ಗಳಿಗೆ ಕೆಪಿಎಮ್‍ಇ ನೋಂದಣಿ ಹೊಂದಿರುವುದು ಕಡ್ಡಾಯವಾಗಿದೆ.

ಅನಧಿಕೃತ ವೈದ್ಯ ವೃತ್ತಿ ನಡೆಸುತ್ತಿರುವುದು, ಅನಧಿಕೃತವಾಗಿ ಟೆಂಟ್ ಹಾಕಿಕೊಂಡು ನಕಲಿ ಔಷಧಿಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವವರು ಕಂಡು ಬಂದಲ್ಲಿ ತಕ್ಷಣವೇ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಎಲ್ಲಾ ಸಾರ್ವಜನಿಕರು ನಕಲಿ ವೈದ್ಯರಿಂದ ದೂರವಿರಲು ಮತ್ತು ಅರ್ಹ ನೋಂದಾಯಿತ ವೈದ್ಯರಿಂದಲೇ ವೈದ್ಯಕೀಯ ಸೇವೆಯನ್ನು ಪಡೆಯಬೇಕೆಂದು ಧಾರವಾಡ ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular