HomeKarnatakaBIG NEWS : ಕಳೆದ 10 ವರ್ಷಗಳಲ್ಲಿ ಜನರ ಕಷ್ಟ 10 ಪಟ್ಟು ಹೆಚ್ಚಳ :...

BIG NEWS : ಕಳೆದ 10 ವರ್ಷಗಳಲ್ಲಿ ಜನರ ಕಷ್ಟ 10 ಪಟ್ಟು ಹೆಚ್ಚಳ : ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ಕಳೆದ 10 ವರ್ಷಗಳ ಬಿಜೆಪಿ ಆಡಳಿತವನ್ನು ಪ್ರಧಾನಿ ಮೋದಿ ಅವರು ಅಮೃತ ಕಾಲ ಎಂದು ಬಣ್ಣಿಸುತ್ತಿದ್ದಾರೆ. ಆದರೆ ಇದು ಭಾರತದ ವಿನಾಸ ಕಾಲ. ಈ ಅವಧಿಯಲ್ಲಿ ಎಲ್ಲಾ ವರ್ಗಗಳ ಜನಸಾಮಾನ್ಯರ ಕಷ್ಟಗಳು 10 ಪಟ್ಟು ಹೆಚ್ಚಳವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕಳೆದ 10 ವರ್ಷಗಳು ದೇಶದ ರೈತರು, ಕಾರ್ಮಿಕರು, ಮಹಿಳೆಯರು, ಯುವಜನರು, ಶೋಷಿತರು ಮತ್ತು ಜನಸಾಮಾನ್ಯರ ಪಾಲಿಗೆ ಅನ್ಯಾಯದ ಕಾಲ. ಜನರ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾದ ಪ್ರಧಾನಿಗಳು ಮೂಕರಾಗಿದ್ದಾರೆ, ಕಷ್ಟ ಕೇಳಬೇಕಾದ ಕೇಂದ್ರದ ಸಚಿವರುಗಳು ಕಿವುಡರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನರೇಂದ್ರ ಮೋದಿ ಅವರ ಉದ್ಯಮಮಿತ್ರರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಶರವೇಗದಲ್ಲಿ ಮುಂದಕ್ಕೆ ಹೋಗುತ್ತಿದ್ದರೆ, ಈ ದೇಶದ ಜನಸಾಮಾನ್ಯ ಕೇಂದ್ರ ಸರ್ಕಾರದ ದುರಾಡಳಿತ, ವೈಫಲ್ಯಗಳ ಭಾರ ಹೊತ್ತು ಕುಸಿದು ಬಿದ್ದಿದ್ದಾನೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular