HomeKarnatakaBIG NEWS: ರಾಜ್ಯದ ಮತದಾರರ ಪಟ್ಟಿಯಿಂದ ಒಂದು ಕೋಟಿ ಹೆಸರು ಡಿಲೀಟ್, ಕರಡು ಪಟ್ಟಿ ಬಳಿಕ...

BIG NEWS: ರಾಜ್ಯದ ಮತದಾರರ ಪಟ್ಟಿಯಿಂದ ಒಂದು ಕೋಟಿ ಹೆಸರು ಡಿಲೀಟ್, ಕರಡು ಪಟ್ಟಿ ಬಳಿಕ ದಾಖಲೆ ನೀಡಿ ಹೆಸರು ಸೇರ್ಪಡೆಗೆ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್) ಪ್ರಕ್ರಿಯೆಯಲ್ಲಿ ಶುಕ್ರವಾರದ ಅಂತ್ಯದ ವೇಳೆಗೆ 98.73 ಲಕ್ಷ ಮತದಾರರು ಹಾಲಿ ಮತದಾರರ ಪಟ್ಟಿಯಿಂದ ಡಿಲೀಟ್ ಆಗಲಿದ್ದಾರೆ.

ಆಗಸ್ಟ್ 8ರ ವೇಳೆಗೆ ಈ ಮತದಾರರ ಸಂಖ್ಯೆ ಒಂದು ಕೋಟಿ ದಾಟುವ ಸಾಧ್ಯತೆ ಇದೆ. ರಾಜ್ಯದಲ್ಲಿ ಇದುವರೆಗಿನ ಎಸ್ಐಆರ್ ಪ್ರಕ್ರಿಯೆಯಲ್ಲಿ 98.73 ಲಕ್ಷ ಮತದಾರರನ್ನು ಎ.ಎಸ್.ಡಿ.ಡಿ.ಓ. ಮತದಾರರು ಎಂದು ಗುರುತಿಸಲಾಗಿದೆ. ಈ ಪೈಕಿ ಪತ್ತೆಯಾಗದವರು/ ಗೈರು 13.77 ಲಕ್ಷ, ಶಾಶ್ವತವಾಗಿ ಸ್ಥಳಾಂತರಗೊಂಡವರು 60.42 ಲಕ್ಷ, ಮೃತ ಮತದಾರರು 15.79 ಲಕ್ಷ, ಈಗಾಗಲೇ ಬೇರೆ ಕಡೆ ನೋಂದಣಿ ಮಾಡಿಕೊಂಡವರು 6.33 ಲಕ್ಷ ಮತ್ತು ಇತರೆ 2.40 ಲಕ್ಷ ಮತದಾರರು ಇದ್ದಾರೆ.

ಈ ಪೈಕಿ 98.73 ಲಕ್ಷ ಮತದಾರರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯಲಿದ್ದಾರೆ. ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರ ಕೇಂದ್ರ ಚುನಾವಣಾ ಆಯೋಗವು ಕ್ಲೇಮು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಿದೆ. 2002ರ ಮತದಾರರ ಪಟ್ಟಿ ಮತ್ತು ಎಸ್ಐಆರ್ ವೇಳೆ ನೀಡಿದ ಮಾಹಿತಿಗಳಲ್ಲಿ ವ್ಯತ್ಯಾಸಗಳಿದ್ದಲ್ಲಿ ಸಂಬಂಧಿಸಿದ ಬಿಎಲ್ಒ ಗಳೇ ಅಂತಹ ಮತದಾರರಿಗೆ ನೋಟಿಸ್ ನೀಡಲಿದ್ದು, ಈ ಸಂದರ್ಭದಲ್ಲಿ ನಿಗದಿತ ದಾಖಲೆಗಳನ್ನು ನೀಡಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular