HomeLatest NewsBIG NEWS: ಇನ್ನು ಛಾಪಾ ಕಾಗದ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪಿಂಗ್ ವಿತರಣೆ: ವಿಧೇಯಕಕ್ಕೆ ರಾಜ್ಯಪಾಲರ...

BIG NEWS: ಇನ್ನು ಛಾಪಾ ಕಾಗದ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪಿಂಗ್ ವಿತರಣೆ: ವಿಧೇಯಕಕ್ಕೆ ರಾಜ್ಯಪಾಲರ ಅನುಮೋದನೆ

ಬೆಂಗಳೂರು: ಛಾಪಾ ಕಾಗದ ಬದಲಿಗೆ ಡಿಜಿಟಲ್ ಇ- ಸ್ಟ್ಯಾಂಪಿಂಗ್ ವಿತರಿಸಲು ಅವಕಾಶ ಕಲ್ಪಿಸುವ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ -2025ಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ.

ಈ ಮೂಲಕ ಮಸೂದೆಯು ಕಾನೂನು ರೂಪ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಇ- ಸ್ಟ್ಯಾಂಪಿಂಗ್ ವ್ಯವಸ್ಥೆಯಲ್ಲಿರುವ ದೋಷ ಸರಿಪಡಿಸಲು ಮತ್ತು ವಂಚನೆ ತಡೆಯಲು ಈ ತಿದ್ದುಪಡಿ ನಿಯಮ ಜಾರಿಗೆ ತಂದಿದೆ.

ಈ ಹಿಂದೆ ಇ- ಸ್ಟ್ಯಾಂಪಿಂಗ್ ಛಾಪಾ ಕಾಗದಗಳನ್ನು ಬಳಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಡಿಜಿಟಲ್ ಇ- ಸ್ಟ್ಯಾಂಪಿಂಗ್ ವ್ಯವಸ್ಥೆ ಬಳಸಬಹುದಾಗಿದೆ. ಬ್ಯಾಂಕ್ ಚಲನ್ ಗಳ ಮೂಲಕ ಸ್ಟ್ಯಾಂಪ್ ಗಳ ದುರುಪಯೋಗ ತಡೆಯಲು ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ವಿದ್ಯುನ್ಮಾನ ಸಹಿಗಳಿಗೆ ಕಾನೂನಾತ್ಮಕವಾಗಿ ಬೆಂಬಲ ನೀಡಲಾಗಿದೆ. ವಿದ್ಯುನ್ಮಾನ ವಿಧಾನಗಳ ಮೂಲಕ ಸ್ಟ್ಯಾಂಪ್ ಶುಲ್ಕ ಪಾವತಿಸಲು ನೂತನ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿಧಾನಸಭೆಯಲ್ಲಿ ಈ ವಿಧಯಕವನ್ನು ಮಂಡಿಸಿ ಮಾರ್ಚ್ 19ರಂದು ಒಪ್ಪಿಗೆ ಪಡೆದುಕೊಳ್ಳಲಾಗಿತ್ತು. ಇದೀಗ ರಾಜ್ಯಪಾಲರ ಅನುಮೋದನೆಯೊಂದಿಗೆ ಕಾನೂನು ರೂಪ ಪಡೆದುಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular