HomeKarnatakaBIG NEWS : ‘ಮೈಕ್ರೋ ಫೈನಾನ್ಸ್’ ಕಂಪನಿಗಳು 'RBI' ಮಾರ್ಗಸೂಚಿ ಪಾಲಿಸೋದು ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ...

BIG NEWS : ‘ಮೈಕ್ರೋ ಫೈನಾನ್ಸ್’ ಕಂಪನಿಗಳು ‘RBI’ ಮಾರ್ಗಸೂಚಿ ಪಾಲಿಸೋದು ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಕ್ರಮ.!

ಫೈನಾನ್ಸ್, ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್ಗಳು ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ  ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಮತ್ತು ಫಾನ್ ಬ್ರೋಕರ್ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಬಿಐ ಮಾರ್ಗಸೂಚಿ ಪ್ರಕಾರ 2 ಲಕ್ಷ ರೂ.ವರೆಗೆ ಮಾತ್ರ ಸಾಲ ನೀಡಬಹುದಾಗಿದೆ. ಆದರೆ ಸಾಲ ನೀಡುವಾಗ ಸಾಲ ಪಡೆಯುವವರು ಸಾಲ ಮರುಪಾವತಿ ಮಾಡುವ ಸಾಮಥ್ರ್ಯ ಇದೆಯೇ ಎಂದು ಗಮನಿಸಿ ಸಾಲವನ್ನು ನೀಡಬೇಕು. ಅದನ್ನು ಬಿಟ್ಟು ಕಿರುಕುಳ ನೀಡುವುದು ಸರಿಯಲ್ಲ ಎಂದು ಹೇಳಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಹರಿಸುವುದು ಎಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ತಾವೂ ಸಹ(ಪೈನಾನ್ಸ್ ಕಂಪನಿಗಳು) ಕಾನೂನು ನಿಯಮಾನುಸಾರ ನಡೆದುಕೊಳ್ಳಬೇಕು. ಅದು ಬಿಟ್ಟು ದೌರ್ಜನ್ಯ ನಡೆಯುವುದು ಕಂಡುಬಂದರೆ ನಿಯಮಾನುಸಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಯೊಬ್ಬರಲ್ಲಿಯೂ ಆರ್ಥಿಕ ಶಿಸ್ತು ಇರಬೇಕು. ಅದನ್ನು ಬಿಟ್ಟು ಹೆಚ್ಚುವರಿ ಸಾಲವನ್ನು ನೀಡುವುದು. 5 ಗಂಟೆಯ ನಂತರ ಸಾಲ ವಸೂಲಾತಿ ಮಾಡಲು ಹೋಗುವುದು. ಇಂತಹ ಪ್ರಕರಣಗಳು ವರದಿಯಾಗಬಾರದು. ಎಲ್ಲರ ರಕ್ಷಣೆ ಅತ್ಯಗತ್ಯ. ಆ ನಿಟ್ಟಿನಲ್ಲಿ ನಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.
ಸಾಲ ವಸೂಲಾತಿ ಮಾಡುವಾಗ ಹೆದರಿಸಬಾರದು. ಹೆದರಿಸುವುದು ಕಂಡುಬಂದಲ್ಲಿ ಸೋ-ಮೋಟೋ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದರು.

ದಬ್ಬಾಳಿಕೆ ಮಾಡಿ ವಸೂಲಾತಿ ಮಾಡಬಾರದು. ಪ್ರತಿಯೊಬ್ಬರ ನಾಗರಿಕ ರಕ್ಷಣೆ ಅತಿಮುಖ್ಯ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಲ ಪಡೆಯುವವರಿಗೆ ಲೋನ್ ಶೀಟ್ ನೀಡಬೇಕು. ಕಾನೂನು ಚೌಕಟ್ಟಿನಲ್ಲಿರಬೇಕು. ಎಂದು ವಿವರಿಸಿದರು.

ಆರ್ಬಿಐ ಮಾರ್ಗಸೂಚಿಯನ್ನು ದಪ್ಪ ಅಕ್ಷರದಲ್ಲಿ ಕನ್ನಡ ಭಾಷೆಯಲ್ಲಿ ಮುದ್ರಿಸಿ ಅಳವಡಿಸಬೇಕು. ಸಾಲದ ಬಡ್ಡಿ ಬಗ್ಗೆ ಮಾಹಿತಿ ಇರಬೇಕು. ಜನರಿಗೆ ತೊಂದರೆ ನೀಡಬಾರದು, ಕಾಲಾವಕಾಶ ನೀಡಬೇಕು ಎಂದರು.
ಸಾಲ ಪಡೆದು ಫೈನಾನ್ಸ್ ಕಂಪನಿಗಳ ವಿರುದ್ದ ತಿರುಗಿ ಬೀಳುವುದು ಕಂಡುಬಂದರೂ ಸಹ ಸಹಾಯವಾಣಿಗೆ ಕರೆ ಮಾಡಬಹುದು. ಒಟ್ಟಾರೆ ಸಮಾಜದಲ್ಲಿ ಶಾಂತಿಯುತ ಬದುಕು ನಡೆಸಬೇಕು. ಎಲ್ಲರ ರಕ್ಷಣೆಯು ಆಡಳಿತದ ಅತೀಮುಖ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ನುಡಿದರು.

ಜಿಲ್ಲೆಯಲ್ಲಿ ನೋಂದಣಿಯಾಗಿರುವ ಮತ್ತು ನೋಂದಣಿಯಾಗದಿರುವ ಮೈಕ್ರೋ ಪೈನಾನ್ಸ್ ಕಂಪನಿಗಳ ಮಾಹಿತಿ ಒದಗಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.ಸಾರ್ವಜನಿಕರು ಮೈಕ್ರೋ ಫೈನಾನ್ಸ್ ಕಿರುಕುಳ ಸಂಬಂಧಿತ ದೂರುಗಳನ್ನು ಪೊಲೀಸ್ ಕಂಟ್ರೋಲ್ ರೂಮ್ ಸಂಖ್ಯೆ 08272-228330 ಅಥವಾ ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಮ್ ಸಂಖ್ಯೆ 08272-221077 ಗೆ ನೀಡಬಹುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ ಒಬ್ಬರಿಗೆ ಒಂಬತ್ತು ಕಂಪನಿಗಳು ಸಾಲ ನೀಡಿರುವುದು ಕಂಡುಬಂದಿದೆ. ಸಾಲ ನೀಡುವಾಗ ಪರಿಶೀಲಿಸಬೇಕು. ಅದನ್ನು ಬಿಟ್ಟು ದೌರ್ಜನ್ಯ ನಡೆಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಮೈಕ್ರೋ ಪೈನಾನ್ಸ್ ಕಂಪನಿಯ ಪ್ರತಿನಿಧಿಯೊಬ್ಬರು ಸಾಲ ಪಡೆದವರು ಸಾಲ ವಾಪಸ್ಸು ನೀಡಲು ಮುಂದೆ ಬರುತ್ತಿಲ್ಲ. ನಮ್ಮ ಮೇಲೆಯೇ(ಪೈನಾನ್ಸ್ ಕಂಪನಿಗಳ ಮೇಲೆ) ದೌರ್ಜನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಪ್ರೊ.ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಇದ್ದರು.
ಇನ್ನಷ್ಟು ಮಾಹಿತಿ:-ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಆಗುತ್ತಿರುವ ಕಿರುಕುಳಗಳ ಕುರಿತು ಮುಖ್ಯಮಂತ್ರಿ ಅವರು ಜಿಲ್ಲಾಮಟ್ಟದಲ್ಲಿ ನಿಗಾವಹಿಸಲು ನಿರ್ದೇಶನ ನೀಡಿದ್ದಾರೆ. ಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿರುವ ವಿಚಾರದ ಬಗ್ಗೆ ಚರ್ಚಿಸಲಾಗಿರುತ್ತದೆ. ಈ ಸಭೆಯಲ್ಲಿ ಚರ್ಚಿಸಿದಂತೆ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.

ಕಾನೂನು ಬಾಹಿರವಾಗಿ ಸಾಲ ವಸೂಲಾತಿ ಮಾಡುವಂತಿಲ್ಲ. ಯಾವುದೇ ಕಾರಣಕ್ಕೂ ಸಾಲಗಾರರ ಮೇಲೆ ಬಾಕಿ ವಸೂಲಾತಿಗಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡ ಹೇರತಕ್ಕದ್ದಲ್ಲ. ಸಾಲ ಬಾಕಿ ವಸೂಲಾತಿ ನೆಪದಡಿ ಸಾಲಗಾರರ ಮನೆ/ಕೌಂಪೌಂಡ್/ಗೋಡೆ ಇತ್ಯಾದಿಗಳ ಮೇಲೆ ಗೋಡೆಬರಹ ಬರೆಯುವುದು / ಅಂಟಿಸುವುದು ಮುಂತಾದ ಕಾರ್ಯ ನಡೆಸತಕ್ಕದ್ದಲ್ಲ. ಸಾಲ ವಸೂಲಾತಿ ವಿಚಾರವಾಗಿ ದೌರ್ಜನ್ಯ / ಅಸಭ್ಯ ವರ್ತನೆ ತೋರುವುದು, ಅಥವಾ ಬಲತ್ಕಾರವಾಗಿ ಚರಾಸ್ಥಿ / ಸ್ಥಿರಾಸ್ಥಿ ಜಪ್ತಿ ಮಾಡುವಂತಿಲ್ಲ. ನೋಂದಣಿಯಾಗಿರದ ಯಾವುದೇ ಮೈಕ್ರೋ ಪೈನಾನ್ಸ್ ಕಂಪೆನಿಗಳು ಕಾರ್ಯಾಚರಿಸುವಂತಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗಧಿಪಡಿಸಿದ ಗರಿಷ್ಟ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿದರ ವಿಧಿಸತಕ್ಕದ್ದಲ್ಲ/ ವಸೂಲಿಸತಕ್ಕದ್ದಲ್ಲ.
ಮೈಕ್ರೋ ಫೈನಾನ್ಸ್ ಕಂಪೆನಿಗಳು ಮೇಲೆ ತಿಳಿಸಿದಂತೆ ಅಥವಾ ಇನ್ಯಾವುದೇ ರೀತಿಯಿಂದ ಸಾಲಗಾರರಿಗೆ ಕಿರುಕುಳ ನೀಡಿದಲ್ಲಿ, ಸಾಲಗಾರರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಲ್ಲಿ ಅಥವಾ ಕಿರುಕುಳ ನೀಡುವುದು ಕಂಡುಬಂದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular