
ಪ್ರಕರಣದ ವಿಚಾರಣೆಗಾಗಿ ಜನವರಿ 5 ರಂದು ತನಿಖಾ ಸಂಸ್ಥೆಯ ಮುಂದೆ ಹಾಜರಾಗುವಂತೆ ಆರ್ಜೆಡಿ ನಾಯಕನಿಗೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉದ್ಯೋಗಕ್ಕಾಗಿ ಭೂಮಿ ಹಗರಣ ಎಂದರೇನು?
ಉದ್ಯೋಗಕ್ಕಾಗಿ ಭೂಮಿ ಹಗರಣವು ಭೂಮಿಗೆ ಬದಲಾಗಿ ಹಲವಾರು ಜನರಿಗೆ ರೈಲ್ವೆ ಉದ್ಯೋಗಗಳನ್ನು ಹಂಚಿಕೆ ಮಾಡುವುದಕ್ಕೆ ಸಂಬಂಧಿಸಿದೆ. ಯುಪಿಎ-1 ಸರ್ಕಾರದಲ್ಲಿ ಲಾಲು ಪ್ರಸಾದ್ ರೈಲ್ವೆ ಸಚಿವರಾಗಿದ್ದಾಗ ಈ ಹಗರಣ ನಡೆದಿದೆ. ಸಿಬಿಐ ಪ್ರಕಾರ, 2004 ರಿಂದ 2009 ರವರೆಗೆ ವಿವಿಧ ರೈಲ್ವೆ ವಲಯಗಳಲ್ಲಿ ಗ್ರೂಪ್ “ಡಿ” ವರ್ಗದ ಉದ್ಯೋಗಗಳನ್ನು ಆಗಿನ ರೈಲ್ವೆ ಸಚಿವ ಲಾಲು ಪ್ರಸಾದ್ ಅವರ ಕುಟುಂಬ ಸದಸ್ಯರಿಗೆ ಮತ್ತು ಎಕೆ ಇನ್ಫೋಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆ ಭೂಮಿಯನ್ನು ವರ್ಗಾಯಿಸಿದ್ದಕ್ಕೆ ಪ್ರತಿಯಾಗಿ ಹಲವಾರು ಜನರಿಗೆ ನೀಡಲಾಯಿತು.

