
ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಈ ಘಟನೆ ನಡೆದಿದೆ. ನಾನ್ ಸ್ಟಾಪ್ ಸ್ಲೀಪರ್ ಬಸ್ ನ್ನು ಹುಬ್ಬಳ್ಳಿ ಸಮೀಪ ಕಿರೇಸೂರು ಡಾಭಾದಲ್ಲಿ ನಿಲುಗಡೆ ಮಾಡಲಾಗಿತ್ತು. ಈ ವೇಳೆ ಯುವತಿ ಕುಳಿತಿದ್ದ ಸೀಟ್ ಬಳಿ ಬಂದ 32 ವರ್ಷದ ಪ್ರಯಾಣಿಕ ಮೂತ್ರವಿಸರ್ಜನೆ ಮಾಡಿದ್ದಾನೆ. ವಿಚಲಿತಗೊಂಡ ಯುವತಿ ಕಿರುಚಿದ್ದಾಳೆ.
ಯುವತಿ ಕೂಗಾಟ ಕೇಳಿ ಸ್ಥಳಕ್ಕೆ ಬಂದ ಸಹ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿಗಳು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಯುವಕನನ್ನು ಅಲ್ಲೇ ಬಿಟ್ಟು ಬಸ್ ಪ್ರಯಾಣ ಮುಂದುವರೆಸಿದೆ.

