HomeKarnatakaBIG NEWS: JDS ಪುಟಗೋಸಿ ಪಕ್ಷ ಎಂದ ಮಾಜಿ ಸಚಿವರಿಗೆ ತಿರುಗೇಟು ನೀಡಿದ HDK

BIG NEWS: JDS ಪುಟಗೋಸಿ ಪಕ್ಷ ಎಂದ ಮಾಜಿ ಸಚಿವರಿಗೆ ತಿರುಗೇಟು ನೀಡಿದ HDK

ಮಂಡ್ಯ: ಜೆಡಿಎಸ್ ಪುಟಗೋಸಿ ಪಕ್ಷ ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ಮಾಜಿ ಸಚಿವ ನಾರಾಯಣಸ್ವಾಮಿ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಚುನಾವಣಾ ಫಲಿತಾಂಶ ಬರಲಿ ಯಾರದ್ದು ಪುಟಗೋಸಿ ಪಕ್ಷ ಎಂಬುದು ಗೊತ್ತಾಗುತ್ತದೆ ಎಂದು ಗುಡುಗಿದ್ದಾರೆ.

ಕಾಂಗ್ರೆಸ್ ನವರು ಮೊದಲು ಅವರ ಪಕ್ಷದ ಪುಟಗೋಸಿ ಸರಿಪಡಿಸಿಕೊಳ್ಳಲಿ. ವಿಪಕ್ಷ ಸ್ಥಾನದ ನಾಯಕನಿಗೆ ಕ್ಷೇತ್ರ ಹುಡುಕಿಕೊಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ನವರು ಮೊದಲು ಅವರ ನಾಯಕನಿಗೆ ಕ್ಷೇತ್ರ ಹುಡುಕಿಕೊಡಲಿ. ಆಮೇಲೆ ಜೆಡಿಎಸ್ ಬಗ್ಗೆ ಮಾತನಾಡಲಿ. ಕಾಂಗ್ರೆಸ್ ನಾಯಕರ ಹೇಳಿಕೆಗೆ ಜನರೇ ಉತ್ತರ ಕೊಡ್ತಾರೆ ಎಂದು ಟಾಂಗ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪುಟಗೋಸಿ ಪಕ್ಷ ಜೆಡಿಎಸ್ ಇಷ್ಟು ಆಟವಾಡಬೇಕಾದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ನವರಾದ ನಾವು ಎಷ್ಟು ಅಟವಾಡಬೇಕು ಎಂದು ಮಾಜಿ ಸಚಿವ ನಾರಾಯಣಸ್ವಾಮಿ ಕಿಡಿಕಾರಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular