ಬೆಂಗಳೂರು: ಬ್ಯಾಂಕುಗಳಿಂದ ಲೆಕ್ಕ ಕೋರಿ ಹೈಕೋರ್ಟ್ ಗೆ ವಿಜಯ್ ಮಲ್ಯ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಿಟ್ ಅರ್ಜಿ ಹೇಗೆ ಊರ್ಜಿತವಾಗುತ್ತದೆ ಎಂದು ಹೈಕೋರ್ಟ್ ಪ್ರಶ್ನೆ ಮಾಡಿದೆ.
ಕಂಪನಿಯ ಕೋರ್ಟ್ ಮುಂದೆ ಅರ್ಜಿಯನ್ನು ಸಲ್ಲಿಸಬೇಕಿತ್ತಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿದೆ. ಹಿರಿಯ ವಕೀಲರ ವಾದ ಮಂಡನೆಗೆ ವಿಜಯಮಲ್ಯ ಪರ ವಕೀಲರಿಂದ ಕಾಲಾವಕಾಶ ಕೋರಲಾಗಿದೆ. ವಿಚಾರಣೆಯನ್ನು ನವೆಂಬರ್ 4ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿಗದಿಪಡಿಸಿದೆ.
6,200 ಕೋಟಿ ರೂ. ಸಾಲ ಕೊಡಬೇಕಿತ್ತು. 14,000 ಕೋಟಿ ರೂಪಾಯಿ ಸಾಲ ವಸೂಲಾಗಿದೆ ಎಂದು ಹಣಕಾಸು ಸಚಿವರು ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂ. ವಸೂಲಾಗಿದೆ ಎಂದು ಹೇಳಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರೆಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕ ಪತ್ರವನ್ನು ವಿಜಯ ಮಲ್ಯ ಕೋರಿದ್ದಾರೆ.
