BIG NEWS : ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ಖಾಸಗಿ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ

ಬೆಂಗಳೂರು : ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ಖಾಸಗಿ ಶಾಲೆಗಳಿಗೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ ಹೊರಡಿಸಿದೆ.

2023-24ನೇ ಸಾಲಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕೆ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಹಾಗೂ 7-10-2023 ರೊಳಗೆ ಇತ್ಯರ್ಥಪಡಿಸುವಂತೆ ಉಪನಿರ್ದೇಶಕರಿಗೆ ಸೂಚಿಸಲಾಗಿತ್ತು ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು 3260 ಅರ್ಜಿಗಳು ಸ್ವೀಕೃತವಾಗಿದ್ದು ಈ ಪೈಕಿ 843 ಅರ್ಜಿಗಳು ಮಾತ್ರ ಪುರಸ್ಕರಿಸಿ ಮಾನ್ಯತೆ ನವೀಕರಿಸಲಾಗಿದೆ. ಮತ್ತು ಹಲವು ಆಡಳಿತ ಮಂಡಳಿಯವರು ಅರ್ಜಿ ಸಲ್ಲಿಸಲು ವಿಫಲರಾಗಿರುತ್ತಾರೆ.

ಆದಕಾರಣ 2021-22 ಹಾಗೂ 2022-23ನೇ ಸಾಲಿನಲ್ಲಿ ಪ್ರಥಮ ಮಾನ್ಯತೆ ಮಾನ್ಯತೆ ನವೀಕರಣವಾಗದಿರುವಂತಹ ಶಾಲೆಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸುವುದು ಹಾಗೂ 2023-24ನೇ ಸಾಲಿಗೆ ಶಾಲೆಗಳು ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಣಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಲು ದಿನಾಂಕ:05-10-2023 ರಿಂದ ದಿನಾಂಕ:25-10-2023 ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಉಪನಿರ್ದೇಶಕರುಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿನ ಎಲ್ಲಾ ಖಾಸಗಿ ಶಾಲೆಗಳಿಗೆ ಈ ಬಗ್ಗೆ ತಿಳುವಳಿಕೆ ಹಾಗೂ ವ್ಯಾಪಕ ಪ್ರಚಾರ ನೀಡಿ 2021-22 ಹಾಗೂ 2022-23 ಸಾಲಿನಲ್ಲಿ ಪ್ರಥಮ ಮಾನ್ಯತೆ/ಮಾನ್ಯತೆ ನವೀಕರಿಸದೆ ಬಾಕಿ ಇರುವಂತಹ ಶಾಲಾ ಆಡಳಿತ ಮಂಡಳಿಗಳಿಗೆ ಅಂತಿಮ ಅವಕಾಶ ನೀಡಿ ಪ್ರಸ್ತುತ ಇಲಾಖೆಯು ಸಿದ್ದಪಡಿಸಿರುವಂತಹ ಹೊಸ ತಂತ್ರಾಂಶದಲ್ಲಿಯೇ ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ ಮಾನ್ಯತೆಯನ್ನು ಪಡೆಯಲು ಸೂಚಿಸುವುದು. ತದನಂತರ 2023-24ನೇ ಸಾಲಿಗೆ ಹೊಸದಾಗಿ ಅರ್ಜಿ ಸಲ್ಲಿಸುವುದು. ಒಂದು ವೇಳೆ ಮಾಹಿತಿಗಳು ಸಮರ್ಪಕವಾಗಿ ಸಲ್ಲಿಸದೆ ಇದ್ದಲ್ಲಿ ನಿಯಮಾನುಸಾರ ಕ್ರಮವಹಿಸಲು ಪ್ರಾಧಿಕಾರಿಗಳಿಗೆ ಸೂಚಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read