ಬೆಂಗಳೂರು: ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುವ ನೋಂದಣಿ ಶುಲ್ಕವನ್ನು ಶೇಕಡ 1ರಿಂದ ಶೇಕಡ 2ಕ್ಕೆ ಹೆಚ್ಚಳ ಮಾಡಲಾಗಿದ್ದು, ಭಾನುವಾರದಿಂದಲೇ ಜಾರಿಯಾಗಿದೆ.
ಸೋಮವಾರ 10,657 ದಸ್ತಾವೇಜು ನೋಂದಣಿಯಾಗಿದ್ದು, 100.34 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ನೋಂದಣಿ ಶುಲ್ಕವನ್ನು ದುಪ್ಪಟ್ಟು ಹೆಚ್ಚಳ ಮಾಡಿ ಆಗಸ್ಟ್ 31ರಿಂದಲೇ ಸರ್ಕಾರ ಜಾರಿಗೊಳಿಸಿದೆ. ಪರಿಷ್ಕೃತ ನೋಂದಣಿ ಶುಲ್ಕಕ್ಕೆ ಸಂಬಂಧಿಸಿದಂತೆ ವೆಬ್ಸೈಟ್ ನಲ್ಲಿ ಅಗತ್ಯ ಮಾರ್ಪಾಡು ಸುಧಾರಣೆ ತರುವ ಕಾರಣಕ್ಕೆ ಶುಕ್ರವಾರ ಮತ್ತು ಶನಿವಾರ ಕೆಲವೊಂದು ನೋಂದಣಿಗೆ ಹೊಸದಾಗಿ ಸಮಯ ಕಾಯ್ದಿರಿಸಿಕೊಳ್ಳುವ ಪ್ರಕ್ರಿಯೆ ತಡೆಹಿಡಿಯಲಾಗಿತ್ತು.
ಭಾನುವಾರದಿಂದ ನೋಂದಣಿ ಪ್ರಕ್ರಿಯೆ ಸಹಜ ಸ್ಥಿತಿಯಲ್ಲಿ ಮುಂದುವರೆದಿದೆ. ಸೋಮವಾರ 10,657 ದಸ್ತಾವೇಜುಗಳ ನೋಂದಣಿಯಾಗಿದ್ದು, 100.34 ಕೋಟಿ ರೂ. ಆದಾಯ ಸಂಗ್ರಹವಾಗಿದೆ.