ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ, ನಾಯಕತ್ವ ಗೊಂದಲದ ನಡುವೆ ಶಾಸಕರು ವಿದೇಶ ಪ್ರವಾಸ ಕೈಗೊಂಡಿದ್ದಾರೆ.
ಕಾಂಗ್ರೆಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಶಾಸಕರಾದ ದೇವೇಂದ್ರಪ್ಪ, ಎಚ್.ಡಿ, ತಮ್ಮಯ್ಯ, ಹಂಪನಗೌಡ ಬಾದರ್ಲಿ, ಪುಟ್ಟರಂಗಶೆಟ್ಟಿ, ಬಿ.ಎಂ. ನಾಗರಾಜ ಗೌಡ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಬಯ್ಯಾಪುರ, ವಸಂತ್ ಕುಮಾರ್, ನಾಗರಾಜ ಯಾದವ್, ಡಾ. ತಿಮ್ಮಯ್ಯ ಮೊದಲಾದವರು ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ.
30ಕ್ಕೂ ಅಧಿಕ ಶಾಸಕರು ವಿದೇಶಕ್ಕೆ ತೆರಳಲು ಸಜ್ಜಾಗಿದ್ದರು. ಆದರೆ, ಪ್ರವಾಸದ ಕುರಿತಾಗಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಕೆಲವು ಶಾಸಕರು ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಉಳಿದಂತೆ 10ಕ್ಕೂ ಅಧಿಕ ಮಂದಿ ವಿದೇಶಕ್ಕೆ ತೆರಳಿದ್ದಾರೆ. ಕುಟುಂಬದವರೊಂದಿಗೆ ಖಾಸಗಿಯಾಗಿ ಪ್ರವಾಸ ಕೈಗೊಳ್ಳಲಾಗಿದೆ. ಕೃಷಿ ಅಧ್ಯಯನ ಉದ್ದೇಶದೊಂದಿಗೆ ಪ್ರವಾಸ ಕೈಗೊಂಡಿರುವುದಾಗಿ ಕೆಲವು ಶಾಸಕರು ಹೇಳಿದ್ದಾರೆ.
ಶಾಸಕರು ರಾತ್ರಿ ಬೆಂಗಳೂರಿನಿಂದ ಪ್ರಯಾಣ ಬೆಳೆಸಿದ್ದು, ಕೌಲಾಲಂಪುರಕ್ಕೆ ತೆರಳಿ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಪ್ರಯಾಣ ಮುಂದುವರೆಸಲಿದ್ದಾರೆ. ವಿದೇಶಕ್ಕೆ ತೆರಳಿದ ಬಹುತೇಕ ಶಾಸಕರಲ್ಲಿ ಸಿಎಂ ಸಿದ್ಧರಾಮಯ್ಯ ಬಣದವರೇ ಇದ್ದಾರೆ ಎಂದು ಹೇಳಲಾಗಿದೆ.

