HomeLatest NewsBIG NEWS: ಡಿಜೆ ಬಳಕೆಗೆ ಅನುಮತಿ ನೀಡುವವರೆಗೆ ಗಣಪತಿ ವಿಸರ್ಜನೆ ಮಾಡದಿರಲು ನಿರ್ಧಾರ

BIG NEWS: ಡಿಜೆ ಬಳಕೆಗೆ ಅನುಮತಿ ನೀಡುವವರೆಗೆ ಗಣಪತಿ ವಿಸರ್ಜನೆ ಮಾಡದಿರಲು ನಿರ್ಧಾರ

ಹಾವೇರಿ: ಡಿಜೆ ಬಳಕೆಗೆ ಅನುಮತಿ ನೀಡುವವರೆಗೂ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾಗಣಪತಿ ಸೇರಿದಂತೆ ಗ್ರಾಮದ ಯಾವುದೇ ಸಾರ್ವಜನಿಕ ಗಣಪತಿಗಳನ್ನು ವಿಸರ್ಜನೆ ಮಾಡದಿರಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಭಾನುವಾರ ಐದನೇ ದಿನಕ್ಕೆ ಗಣಪತಿ ವಿಸರ್ಜನೆ ಮಾಡಬೇಕಿತ್ತು. ಚಳಗೇರಿ ಟೋಲ್ ಸಮೀಪ ಡಿಜೆ ಸೌಂಡ್ ಸಿಸ್ಟಂ ಗ್ರಾಮಕ್ಕೆ ಬರದಂತೆ ಪೊಲೀಸರು ತಡೆದಿದ್ದಾರೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಸಂಪೂರ್ಣ ಡಿಜೆ ಬೇಡ, ಒಂದೆರಡು ಡಿಜೆ ಬಾಕ್ಸ್ ಕೊಡಿ ಸಾಕು ಎಂದು ಕೇಳಿಕೊಂಡರು ಪೊಲೀಸರು ಅನುಮತಿ ನೀಡಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡದಿರಲು ನಿರ್ಧಾರ ಕೈಗೊಂಡಿದ್ದಾರೆ.

 ಡಿಜೆ ಬಳಕೆಗೆ ಅವಕಾಶ ನೀಡುವವರೆಗೆ ಮೋಟೆಬೆನ್ನೂರು ಹಿಂದೂ ಮಹಾ ಗಣಪತಿ ಸೇರಿ ಯಾವುದೇ ಗಣಪತಿ ವಿಸರ್ಜಿಸುವುದಿಲ್ಲ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular