HomeCrimeBIG NEWS : ನಿರ್ಮಾಪಕ ಪುಷ್ಕರ್ ಗೆ ಬಡ್ಡಿ ದಂಧೆಕೋರರ ಕಿರುಕುಳ , ನಾಲ್ವರ ವಿರುದ್ಧ...

BIG NEWS : ನಿರ್ಮಾಪಕ ಪುಷ್ಕರ್ ಗೆ ಬಡ್ಡಿ ದಂಧೆಕೋರರ ಕಿರುಕುಳ , ನಾಲ್ವರ ವಿರುದ್ಧ FIR ದಾಖಲು.!

ಬೆಂಗಳೂರು : ಸಿನಿಮಾ ನಿರ್ಮಾಪಕ ಪುಷ್ಕರ್ ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪುಷ್ಕರ್ ಅವರು ನೀಡಿದ ದೂರು ಆಧರಿಸಿ ಸಹಕಾರ ಸಂಘಗಳ ಉಪ ನಿಬಂಧಕ ಕಿಶೋರ್ ಕುಮಾರ್ ಸಿಸಿಬಿ ಠಾಣೆಗೆ ದೂರು ನೀಡಿದ್ದಾರೆ.

ಸಿ ಹರ್ಷ, ಡಿ ಬಿ ಆದರ್ಷ, ಶಿವು, ಡಿಬಿ ಹರ್ಷ ವಿರುದ್ಧ ಪ್ರಕರಣ ದಾಖಲಾಗಿದೆ. ಆರ್ಥಿಕ ಸಂಕಷ್ಟದಿಂದ ಪಾರಾಗಲು ಹಲವರ ಬಳಿ ಸಾಲಕ್ಕೆ ಹಣ ಕೇಳಿದ್ದೆ, ಸಾಲಕ್ಕೆ ಭದ್ರತೆಯಾಗಿ 10 ಖಾಲಿ ಚೆಕ್ ಕೂಡ ನೀಡಿದ್ದೆ, ಸಾಲಕ್ಕೆ ಪ್ರತಿ ತಿಂಗಳು ಬಡ್ಡಿ ಕೂಡ ಪಾವತಿಸಿದ್ದೇನೆ. ಆದರೆ ಇನ್ನೂ ನಮಗೆ 13 ಕೋಟಿ ನೀಡಬೇಕು ಎಂದು ಮನೆ ಹತ್ತಿರ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿರ್ಮಾಪಕ ಪುಷ್ಕರ್ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular